ಕೈಲ್ ಮೇಯರ್ಸ್ ರೋಚಕ ಬ್ಯಾಟಿಂಗ್: ಡೆಲ್ಲಿ ಕ್ಯಾಪಿಟಲ್ಸ್ ಗೆ 194 ಟಾರ್ಗೆಟ್ ಕೊಟ್ಟ ಲಖನೌ!

ಹೊಸದಿಗಂತ ಡಿಜಿಟಲ್ ಡೆಸ್ಕ್:
 
ಕೈಲ್ ಮೇಯರ್ಸ್, ನಿಕೋಲಸ್ ಪೂರನ್ ಆಕ್ರಮಣಕಾರಿ ಬ್ಯಾಟಿಂಗ್‌ನಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಲಖನೌ ಸೂಪರ್ ಜೈಂಟ್ಸ್ 6 ವಿಕೆಟ್ ನಷ್ಟಕ್ಕೆ 193 ರನ್ ಸಿಡಿಸಿದೆ. ಮೇಯರ್ಸ್ 73 ರನ್ ಚಚ್ಚಿದರೆ, ಇತ್ತ ಪೂರನ್ 36 ರನ್ ಸಿಡಿಸಿದರು.

ಮೊದಲು ಬ್ಯಾಟಿಂಗ್ ಇಳಿದ ಲಖನೌ ಸೂಪರ್ ಜೈಂಟ್ಸ್ ಆರಂಭದಲ್ಲೇ ನಾಯಕ ಕೆಎಲ್ ರಾಹುಲ್ ವಿಕೆಟ್ ಕಳೆದುಕೊಂಡಿತು. ರಾಹುಲ್ ಕೇವಲ 8 ರನ್ ಸಿಡಿಸಿ ಔಟಾದರು. ಆದರೆ ಕೈಲ್ ಮೇಯರ್ಸ್ ಲಖನೌ ತಂಡಕ್ಕೆ ಸಿಕ್ಸರ್ ಮೂಲಕವೇ ಆಸರೆಯಾದರು. ದೀಪಕ್ ಹೂಡ 17 ರನ್ ಸಿಡಿಸಿ ಔಟಾದರು.

ಮೇಯರ್ಸ್ ಆಕರ್ಷಕ ಅರ್ಧಶತಕ ಸಿಡಿಸಿ ಮಿಂಚಿದರು. ಮೇಯರ್ಸ್ 38 ಎಸೆತದಲ್ಲಿ 73 ರನ್ ಸಿಡಿಸಿ ಔಟಾದರು. ಮಾರ್ಕಸ್ ಸ್ಟೋಯ್ನಿಸ್ 12 ರನ್ ಸಿಡಿಸಿ ನಿರ್ಗಮಿಸಿದರು. ನಿಕೋಲಸ್ ಪೂರನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಆದರೆ ಪೂರನ್ 21 ಎಸೆತದಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 36 ರನ್ ಸಿಡಿಸಿ ಔಟಾದರು.

ಆಯಷ್ ಬದೋನಿ 18 ರನ್ ಸಿಡಿಸಿದರು. ಕೊನೆಯ ಎಸೆತ ಇರುವಾಗ ಕ್ರೀಸ್‌ಗೆ ಬಂದ ಕೃಷ್ಣಪ್ಪ ಗೌತಮ್, ಸಿಕ್ಕ ಒಂದು ಎಸೆತವನ್ನು ಸಿಕ್ಸರ್ ಸಿಡಿಸಿದರು. ಇತ್ತ ಕ್ರುನಾಲ್ ಪಾಂಡ್ಯ ಅಡೇಯ 15 ರನ್ ಸಿಡಿಸಿದರೆ, ಗೌತಮ್ ಅಜೇಯ 6 ರನ್ ಸಿಡಿಸಿದರು. ಇದರೊಂದಿಗೆ ಲಖನೌ ಸೂಪರ್ ಜೈಂಟ್ಸ್ 6 ವಿಕೆಟ್ ನಷ್ಟಕ್ಕೆ 193 ರನ್ ಸಿಡಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!