ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕನ್ ಮಾಡೆಲ್ ಕೈಲಿ ಜೆನ್ನರ್‌ಗೆ ಇನ್ಸ್‌ಟಾಗ್ರಾಮ್‌ನಲ್ಲಿ 300 ಮಿಲಿಯನ್ ಫಾಲೋವರ‍್ಸ್ ಇದ್ದಾರೆ. ಈ ಮೂಲಕ 300 ಮಿಲಿಯನ್ ಅನುಯಾಯಿಗಳನ್ನು ಹೊಂದಿದ ವಿಶ್ವದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಕೈಲಿ ಪಾತ್ರರಾಗಿದ್ದಾರೆ.
ಕೈಲಿಗಿಂತ ಮೊದಲು ನಟಿ ಅರಿಯಾನಾ ಗ್ರಾಂಡೆ ಇನ್ಸ್ಟಾಗ್ರಾಮ್‌ನಲ್ಲಿ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದ ಮಹಿಳೆಯಾಗಿದ್ದರು. ಅರಿಯಾನಾಗೆ ಇದೀಗ 289 ಮಿಲಿಯನ್ ಫಾಲೋವರ‍್ಸ್ ಇದ್ದಾರೆ. ಅರಿಯಾನಗೂ ಮುನ್ನ ಸೆಲೆನಾ ಗೊಮೆಜ್‌ಗೆ ಅತಿ ಹೆಚ್ಚು ಫಾಲೋವರ‍್ಸ್ ಇದ್ದರು.
ಇನ್ಸ್ಟಾಗ್ರಾಂನ ಅಧಿಕೃತ ಖಾತೆಯಲ್ಲಿ ಒಟ್ಟಾರೆ 460 ಮಿಲಿಯನ್ ಫಾಲೋವರ‍್ಸ್ ಹೊಂದಬಹುದು. ಕ್ರಿಸ್ಟಿಯಾನೋ ರೊನಾಲ್ಡೋಗೆ 388 ಮಿಲಿಯನ್ ಫಾಲೋವರ‍್ಸ್ ಇದ್ದಾರೆ.
ಕೈಲಿ ತನ್ನ ಅಭಿಮಾನಿಗಳನ್ನು ರಂಜಿಸೋದಕ್ಕೆ ಆಗಾಗ ಉತ್ತಮ ಪೋಸ್ಟ್‌ಗಳನ್ನು ಹಾಕುತ್ತಿರುತ್ತಾರೆ. ಇದೀಗ ಎರಡನೇ ಮಗುವಿನ ನಿರೀಕ್ಷೆಯಲ್ಲಿರೋ ಕೈಲಿ ಹಲವಾರು ವೈಯಕ್ತಿಕ ಫೋಟೊಗಳನು ಹಂಚಿಕೊಂಡು ಇನ್ಸ್ಟಾಗ್ರಾಮ್ ಕೂಡ ಫ್ಯಾಮಿಲಿ ಇದ್ದಂತೆ ಎಂದು ಹೇಳಿದ್ದಾರೆ.