October 18, 2026
Sunday, October 18, 2026
spot_img

ತಗಡಿನ ಶೀಟ್‌ಗೆ ವಿದ್ಯುತ್ ತಂತಿ ತಗುಲಿ ಕೂಲಿಕಾರ್ಮಿಕನ ದಾರುಣ ಸಾ*ವು

ಹೊಸದಿಗಂತ ವರದಿ ಕಾರವಾರ:

ಸಮಾರಂಭವೊಂದಕ್ಕೆ ಹಾಕಲಾಗಿದ್ದ ಟೆಂಟ್ ಕಳಚುತ್ತಿದ್ದ ಸಂದರ್ಭದಲ್ಲಿ ತಗಡಿನ ಶೀಟಿಗೆ ವಿದ್ಯುತ್ ತಂತಿ ತಗಲಿದ ಪರಿಣಾಮ ಕೂಲಿಕಾರ್ಮಿಕ ಮೃತ ಪಟ್ಟ ಘಟನೆ ನಗರದ ಕೆ.ಎಚ್.ಬಿ ಕಾಲನಿಯಲ್ಲಿ ಸಂಭವಿಸಿದೆ.

ಪದ್ಮನಾಭನಗರದ ನಿವಾಸಿ ಭರತ ಗೌಡ(30) ಎಂಬಾತನೇ ಮೃತ ದುರ್ದೈವಿಯಾಗಿದ್ದು ಈತ ಹಬ್ಬುವಾಡ ಕೆ.ಎಚ್. ಬಿ ಕಾಲನಿಯ ಜ್ಞಾನೇಶ್ವರಿ ಶಾಲೆಯ ಬಳಿ ಗೃಹಪ್ರವೇಶ ಸಮಾರಂಭವೊಂದರ ಟೆಂಟಿಗೆ ಹಾಕಲಾಗಿದ್ದ ಟಗಡಿನ ಶೀಟನ್ನು ಇಳಿಸುತ್ತಿರುವಾಗ ಪಕ್ಕದ ಮನೆಯ ವಿದ್ಯುತ್ ತಂತಿ ತಗಡಿಗೆ ತಗುಲಿ ವಿದ್ಯುತ್ ಹರಿದು ಏಣಿಯ ಮೇಲಿಂದ ಕೆಳಗೆ ಬಿದ್ದು ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ.

ಕಾರವಾರ ಶಹರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.

Must Read