Tuesday, March 28, 2023

Latest Posts

ಬ್ರಿಟನ್‌ನಲ್ಲಿ ಹಣ್ಣು-ತರಕಾರಿಗಳ ಕೊರತೆ, ಒಬ್ಬ ವ್ಯಕ್ತಿ ಇಷ್ಟೇ ಖರೀದಿ ಮಾಡಬೇಕು ಎಂದು ರೂಲ್ಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬ್ರಿಟನ್‌ನಲ್ಲಿ ಹಣ್ಣು-ತರಕಾರಿಗಳಿಗೆ ಹಾಹಾಕಾರ ಎದುರಾಗುವ ಸಾಧ್ಯತೆ ಇದೆ.

ಬ್ರಿಟನ್‌ನ ಸೂಪರ್ ಮಾರ್ಕೆಟ್‌ಗಳಲ್ಲು ಹಣ್ಣು ತರಕಾರಿಗಳ ಸೆಕ್ಷನ್ ಖಾಲಿ ಖಾಲಿಯಾಗಿ ಕಾಣುತ್ತಿದೆ. ಇಲ್ಲಿ ಒಬ್ಬ ವ್ಯಕ್ತಿ ಇಷ್ಟೇ ಖರೀದಿ ಮಾಡಬೇಕು ಎನ್ನುವ ನಿಯಮವನ್ನು ಮಾಡಲಾಗಿದೆ. ಟೊಮ್ಯಾಟೊ, ಮೆಣಸಿನಕಾಯಿ, ಸೌತೆಕಾಯಿ, ಬ್ರೊಕೊಲಿ, ಹೂಕೋಸು, ಮತ್ತಿತರ ತರಕಾರಿಗಳ ಪೂರೈಕೆ ಕಡಿಮೆಯಾಗಿದೆ.

ಪ್ರತಿ ವ್ಯಕ್ತಿ ಇಷ್ಟು ತರಕಾರಿ ಹಣ್ಣು ಮಾತ್ರ ಕೊಂಡೊಯ್ಯಬೇಕು ಎಂದು ನಿಯಮ ಮಾಡಿದ್ದು, ಗ್ರಾಹಕರು ತೊಂದರೆ ಅನುಭವಿಸುತ್ತಿದ್ದಾರೆ. ಆಫ್ರಿಕಾ, ಯೂರೋಪ್‌ನಲ್ಲಿ ಪ್ರತಿಕೂಲ ವಾತಾವರಣ, ರಷ್ಯಾ-ಉಕ್ರೇನ್ ಯುದ್ಧದ ಕಾರಣ ಪೂರೈಕೆ ಕೊರತೆ ಎದುರಾಗಿದೆ. ಮುಂದಿನ ಒಂದು ತಿಂಗಳ ಕಾಲ ಇದೇ ಸ್ಥಿತಿ ಇರಲಿದೆ ಎಂದು ಬ್ರಿಟನ್ ಸರ್ಕಾರ ಹೇಳಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!