ಎಷ್ಟೇ ಅರ್ಜೆಂಟ್ ಆಗಿದ್ರೂ ಪಬ್ಲಿಕ್ ಬಾತ್‌ರೂಮ್‌ಗೆ ಮಾತ್ರ ಕಾಲಿಡೋದಿಲ್ಲ, ಕೊಳಕು, ವಾಸನೆ, ಮುಜುಗರ ಹೀಗೆ ನಾನಾ ಕಾರಣಗಳಿಂದ ಮನೆಗೆ ಬರುವವರೆಗೂ ಕಾದು ಮನೆಯಲ್ಲೇ ಬಾತ್‌ರೂಂಗೆ ಹೋಗೋರು ಇದ್ದಾರೆ. ಈ ರೀತಿ ಮೂತ್ರ ಮಾಡಬೇಕು ಎನಿಸಿದ್ರೂ ಹಾಗೇ ಇರೋದು ಒಕೆನಾ?
ನಿಮ್ಮ ದೇಹಕ್ಕೆ ವಿರುದ್ಧ
ನಿಮ್ಮ ದೇಹಕ್ಕೆ ವಿರುದ್ಧವಾಗಿ ನೀವು ನಡೆದುಕೊಳ್ಳುತ್ತಿದ್ದೀರ. ದೇಹದ ಅಂಗಗಳ ಕಾರ್ಯ ನೀವಂದುಕೊಂಡಷ್ಟು ಸುಲಭ ಅಲ್ಲ. ದೇಹದ ಟಾಕ್ಸಿನ್ ಅಂಶ ಇನ್ನೂ ಸ್ವಲ್ಪ ಹೊತ್ತು ದೇಹದಲ್ಲೇ ಇಟ್ಟುಕೊಳ್ಳುವ ನಿಮ್ಮ ನಿರ್ಧಾರದಿಂದ ಸಮಸ್ಯೆ ತಪ್ಪಿದ್ದಲ್ಲ.
ಇನ್ಫೆಕ್ಷನ್
ಯುರಿನರಿ ಟ್ರಾಕ್ ಇನ್ಫೆಕ್ಷನ್ ಬರುವ ಸಾಧ್ಯತೆ ಹೆಚ್ಚಿದೆ. ಇದರಿಂದ ಆಗಾಗ ಮೂತ್ರ ವಿಸರ್ಜನೆ ಮಾಡಬೇಕೆನಿಸುವುದು, ಉರಿಯುವುದು, ವಾಸನೆ ಬರುವುದು, ರಕ್ತ ಬರುವುದು ಹೀಗೆ ಮುಂತಾದ ಸಮಸ್ಯೆಗಳು ಬರುತ್ತವೆ.
ಕಿಡ್ನಿ ಸ್ಟೋನ್ಸ್
ಕಿಡ್ನಿ ಸ್ಟೋನ್ಸ್‌ಗೆ ಯೂರಿನ್ ಹೋಲ್ಡ್ ಮಾಡುವುದು ಒಂದೇ ಕಾರಣ ಅಲ್ಲ. ಆದರೆ ಬಹಳ ಸಮಯ ಮೂತ್ರ ವಿಸರ್ಜಿಸದೇ ಇರುವುದರಿಂದ ಕಿಡ್ನಿಯಲ್ಲಿ ಕಲ್ಲುಗಳ ಉತ್ಪಾದನೆ ಆಗಬಹುದು.
10 ಗಂಟೆಗೂ ಹೆಚ್ಚು ಮೂತ್ರ ವಿಸರ್ಜನೆ ಮಾಡದಿರುವುದರಿಂದ ಗಂಭೀರವಾದ ಸಮಸ್ಯೆ ಬರಬಹುದು. ಕೆಲವು ರೇರ್ ಕೇಸ್‌ಗಳಲ್ಲಿ ಬ್ಲಾಡರ್ ಬರ‍್ಸ್ಟ್ ಕೂಡ ಆಗಬಹುದು.