ಮಹಿಳೆಯರೇ ಒತ್ತಡದಲ್ಲಿದ್ದೀರಾ? ನಿಮ್ಮ ಪತಿಯ ಶರ್ಟ್‌ನ ವಾಸನೆಯಿಂದ ನೆಮ್ಮದಿ ಸಿಗಬಹುದು..

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮನಸ್ಸಿಗೆ ಸಣ್ಣ ನೋವಾದರೂ ಮೊದಲು ಯಾರ ಬಳಿ ಹೋಗುತ್ತೀರಾ? ಹೌದು, ಸಾಮಾನ್ಯವಾಗಿ ಎಲ್ಲರೂ ತಮ್ಮ ಸಂಗಾತಿ ಬಳಿ ನೋವು ಹೇಳಿಕೊಂಡು ಸಮಾಧಾನ ಮಾಡಿಕೊಳ್ಳುತ್ತಾರೆ. ಆದರೆ ಎಲ್ಲ ಸಮಯದಲ್ಲಿಯೂ ಸಂಗಾತಿ ಜೊತೆಗೇ ಇರಲು ಆಗಬೇಕಲ್ಲ?

ಪತಿ ಆಫೀಸ್‌ಗೆ ಹೋಗಿದ್ದರೂ ಪರವಾಗಿಲ್ಲ, ಅವರ ಶರ್ಟ್‌ನ ವಾಸನೆ ತೆಗೆದುಕೊಂಡರೆ ಮಹಿಳೆಯರಿಗೆ ಒತ್ತಡ ಕಡಿಮೆಯಾಗುತ್ತದಂತೆ! ಇದನ್ನು ನಾವು ಹೇಳುತ್ತಿಲ್ಲ, ಮಾರ್ಲಿನ್ ಹೋಫರ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಮುಖ ಲೇಖಕ ಜರ್ನಲ್ ಆಫ್ ಪರ್ಸನಾಲಿಟಿ ಆಂಡ್ ಸೋಶಿಯಲ್ ಸೈಕಾಲಜಿ ಸಂಶೋಧನೆ ನಡೆಸಿ ಈ ವಿಷಯವನ್ನು ತಿಳಿದಿದ್ದಾರೆ.

ಸಂಶೋಧನೆಯಲ್ಲಿ ಪಾಲ್ಗೊಂಡ ಮಹಿಳೆಯರಿಗೆ ಪತಿಯ ದೈಹಿಕ ಉಪಸ್ಥಿತಿಯಿಲ್ಲದಿದ್ದರೂ, ಅವರ ವಾಸನೆ ಇರುವ ಶರ್ಟ್ ನೆಮ್ಮದಿ ನೀಡಿದೆಯಂತೆ. ಅದು ಪರ್ಫ್ಯೂಮ್ ವಾಸನೆ ಆಗಿರಬಹುದು ಅಥವಾ ಬೆವರು ಸೇರಿರಬಹುದು. ಈ ವಾಸನೆಯಿಂದ ನನಗೆ ಬೇಕಾದವರು ನನ್ನ ಜೊತೆಯೇ ಇದ್ದಾರೆ ಎನ್ನುವ ಭಾವನೆ ಅವರಿಗೆ ಬರುತ್ತದಂತೆ. ಇದು ಒತ್ತಡ ದೂರ ಮಾಡಲು ಸಹಾಯಕವಾಗಿದೆಯಂತೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!