ಹೊಸ ದಿಗಂತ ಡಿಜಿಟಲ್ ಡೆಸ್ಕ್:
ತಮಿಳಿನ ನಟ, ನಿರ್ಮಾಪಕ ಧನುಷ್ ವಿರುದ್ದ ನಟಿ ನಯನತಾರಾ ಸಿಡಿದೆದ್ದಿದ್ದಾರೆ. ಶನಿವಾರ ಅವರ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಬಹಿರಂಗ ಪತ್ರ ಹೊಸ ಸಂಚಲನವನ್ನೇ ಸೃಷ್ಟಿಸಿದೆ.
ಪತ್ರದಲ್ಲಿ ನಯನತಾರಾ, ಧನುಷ್ ಅವರ ವರ್ತನೆಯನ್ನು ಅಕ್ಷರ ಅಕ್ಷರಗಳಲ್ಲಿ ಟೀಕೆ ಮಾಡಿದ್ದಾರೆ. ನಯನತಾರಾ ಅವರ ನೆಟ್‌ಫ್ಲಿಕ್ಸ್ ಡಾಕ್ಯುಮೆಂಟರಿ, ‘ನಯನತಾರಾ: ಬಿಯಾಂಡ್ & ಫೇರಿಟೇಲ್’ ನಲ್ಲಿ ಧನುಷ್ ನಿರ್ಮಾಣದ ನಾನುಮ್ ರೌಡಿ ದಾನ್ ಸಿನಿಮಾದ ಮ್ಯೂಸಿಕ್ ಹಾಗೂ ವಿಡಿಯೋಗಳನ್ನು ಬಳಸಿಕೊಳ್ಳುವ ವಿಚಾರದಲ್ಲಿ ಶುರುವಾದ ಗಲಾಟೆ ಇದೀಗ ದೊಡ್ಡ ವಿವಾದಕ್ಕೆ ಕಾರಣವಾಗುವ ಲಕ್ಷಣ ತೋರಿದೆ.
ಈ ನಡುವೆ ನಯನತಾರಾ ಪೋಸ್ಟ್‌ಗೆ ಸಿನಿಮಾರಂಗದ ಯಾರೂ ಕೂಡ ಈವರೆಗೂ ಕಾಮೆಂಟ್ ಮಾಡಿಲ್ಲ. ಆದರೆ, ಕನ್ನಡದ ನಟಿ ಮೇಘನಾ ರಾಜ್, ಅನುಪಮಾ ಪರಮೇಶ್ವರನ್, ಪಾರ್ವತಿ ತಿರುವೊತ್ತು, ಐಶ್ವರ್ಯ ರಾಜೇಶ್, ಐಶ್ವರ್ಯ ಲಕ್ಷ್ಮಿ, ಶ್ರುತಿ ಹಾಸನ್ ಲೈಕ್ ಮಾಡಿದ್ದಾರೆ. ಇವರ ಪೈಕಿ ಶ್ರುತಿ ಹಾಸನ್ ಧನುಷ್ ಅವರೊಂದಿಗೆ ‘3’ ಸಿನಿಮಾದಲ್ಲಿ ನಟಿಸಿದ್ದು ಮಾತ್ರವಲ್ಲದೆ, ಅವರೊಂದಿಗೆ ರಿಲೇಷನ್‌ಷಿಪ್‌ನಲ್ಲಿದ್ದರೂ ಎಂದು ವರದಿಯಾಗಿತ್ತು. ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಕೂಡ ಲೈಕ್ ಕೊಟ್ಟು ಬೆಂಬಲಿಸಿದ್ದಾರೆ.
ಇನ್ನು ಧನುಷ್ ವಿರುದ್ಧ ಸಿನಿಮಾ ಮಂದಿ ತಿರುಗಿ ಬಿದ್ದಿದ್ದು ಇದೇ ಮೊದಲೇನಲ್ಲ. ಆದರೆ, ಲೇಡಿ ಸೂಪರ್‌ಸ್ಟಾರ್, ತಮಿಳು ಸಿನಿಮಾದ ಸೂಪರ್ ಸ್ಟಾರ್ ಧನುಷ್ ವಿರುದ್ಧ ಸಾರ್ವಜನಿಕವಾಗಿ ಪೈಪೋಟಿಗೆ ಬಿದ್ದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಬಹಿರಂಗ ಪತ್ರದಲ್ಲಿ ಸಾಕಷ್ಟು ವಿಚಾರವನ್ನು ನಯನತಾರಾ ಹೇಳಿಕೊಂಡಿದ್ದಾರೆ. ಯಾವುದೇ ಸಿನಿಮಾ ಬ್ಯಾಕ್‌ಗ್ರೌಂಡ್ ಕುಟುಂಬ ಅಲ್ಲದೇ ಇದ್ದರೂ, ಸಿನಿಮಾ ರಂಗದಲ್ಲಿ ಅಭಿಮಾನಿಗಳ ಸಹಾಯದಿಂದ ತಾನು ಮೇಲೆದಿದ್ದೇನೆ ಎಂದು ಅವರು ಹೇಳಿದ್ದಾರೆ. ಅದರೊಂದಿಗೆ ಧನುಷ್ ಅವರ ವರ್ತನೆಯನ್ನು ಟೀಕೆ ಕಟುವಾಗಿ ಟೀಕೆ ಮಾಡಿದ್ದಾರೆ.