ಮೂಡಬಿದಿರೆಯ ಸಾವಿರ ಕಂಬ ಬಸದಿಯಲ್ಲಿ ಲಕ್ಷ ದೀಪೋತ್ಸವ ಸಂಭ್ರಮ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮೂಡಬಿದಿರೆಯ ಜಗತ್ಪ್ರಸಿದ್ದ ಸಾವಿರ ಕಂಬ ಬಸದಿ ಲಕ್ಷ ದೀಪೋತ್ಸವ ಭಗವಾನ್ ೧00೮ ಶ್ರೀ ಚಂದ್ರನಾಥ ಸ್ವಾಮಿ ಪಂಚಾಮೃತ ಅಭಿಷೇಕ, ಅಷ್ಟ ವಿಧಾರ್ಚಾನೆ ಪೂಜೆ ಗಳೊಂದಿಗೆ ಭಗವಂತನ ಸನ್ನಿಧಿಯಲ್ಲಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಅಯಿ೯ಕಾ ಪ್ರಸನ್ನ ಮತಿ ಅಯಿ೯ಕಾ ಕೀರ್ತಿ ಮತಿ ಮಾತಾಜಿ ಪಾವನ ಸಾನ್ನಿಧ್ಯ ವಹಿಸಿದ್ದರು.
ಮಾರ್ಗದರ್ಶನ ಆಶೀರ್ವಾದ ನೀಡಿದ ಜಗದ್ಗುರು ಸ್ವಸ್ತಿಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ, ಉತ್ತಮ ಗುಣ, ದೈವಿ ಸಂಪತ್ತು, ಅಂತರಂಗದ ಗುಣಗಳು ನಿಜವಾದ ಜೀವನದ ಬೆಳಕು. ಸರ್ವರಿಗೂ ಹಿತವನ್ನು ಉಂಟು ಮಾಡುವ ಭಗವಂತ ಸರ್ವಜ್ಞರಾಗಿ ನಮ್ಮ ಅಜ್ಞಾನ ಎಂಬ ಕತ್ತಲೆಯನ್ನು ದೂರ ಮಾಡುವವರು. ಹಾಗಾಗಿ ಸಾಂಕೇತಿಕವಾಗಿ ದೀಪ ಹಚ್ಚಿ ಮೋಹ ಎಂಬ ಅಂಧಕಾರ ನಾಶ ಮಾಡಿದ ಭಗವಂತನ ಮುಂದೆ ಸಾವಿರ ಕಂಬ ಬಸದಿಯಲ್ಲಿ ದೀಪೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.

ಪ್ರಮುಖರಾದ ಅಭಯಚಂದ್ರ ಜೈನ್, ಶಂಭವ್ ಕುಮಾರ್, ಬಸದಿ ಮುಕ್ತೇಸರರಾದ ಪಟ್ಣಶೆಟ್ಟಿ ಸುದೇಶ್ ಕುಮಾರ್, ದಿನೇಶ್ ಕುಮಾರ್, ಆದರ್ಶ್, ಕುಲದೀಪ್ ಅರಮನೆ, ಶೈಲೇoದ್ರ ಜೈನ್, ಡಾ. ರೇಷ್ಮಾ, ವಕೀಲ ಎಂ.ಆರ್. ಬಲ್ಲಾಳ್, ವಿವಿಧ ರಾಜ್ಯಗಳಿಂದ ಆಗಮಿಸಿದ್ದ ಸಾವಿರಾರು ಜೈನ ಯಾತ್ರಾರ್ಥಿ ಗಳು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!