ಲಂಕಾದಿಂದ ಚೀನಾಕ್ಕೆ ಹಾರಲಿವೆ ಲಕ್ಷ, ಲಕ್ಷ ಕೋತಿಗಳು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಶ್ರೀಲಂಕಾದಲ್ಲಿ ಅಳಿವಿನಂಚಿನ ಪ್ರಬೇಧದ ಒಂದು ಲಕ್ಷ ಕೋತಿಗಳನ್ನು ಚೀನಾಕ್ಕೆ ಕಳುಹಿಸಿಕೊಡಲು ಲಂಕಾ ಸರ್ಕಾರ ಒಪ್ಪಿಕೊಂಡಿದೆ. ನಮ್ಮ ದೇಶದಲ್ಲಿಯೇ ಅಳಿವಿನಂಚಿನಲ್ಲಿರುವ ಕೋತಿಗಳನ್ನು ಕಳುಹಿಸಬಾರದು ಎಂದು ಪರಿಸರವಾದಿಗಳು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು. ವಿರೋಧದ ನಡುವೆಯೂ ಲಂಕಾ ಸರ್ಕಾರ ಚೀನಾ ಬೇಡಿಕೆಗೆ ಸ್ಪಂದಿಸಿದೆ.

ಚೀನಾದಲ್ಲಿ ಮೃಗಾಲಯದ ಜೊತೆಗೆ ಸಹಭಾಗಿತ್ವವುಳ್ಳ ಪ್ರಾಣಿ ಸಂತತಿ ವೃದ್ಧಿಗೆ ಒತ್ತು ನೀಡುವ ಖಾಸಗಿ ಕಂಪನಿಯೊಂದು ಒಂದು ಲಕ್ಷ ಕೋತಿಗಳಿಗೆ ಬೇಡಿಕೆ ಇಟ್ಟಿದ್ದು, ಇದಕ್ಕೆ ಲಂಕಾ ಸರ್ಕಾರ ಒಪ್ಪಿದೆ.

ಒಂದೇ ಬಾರಿಗೆ ಲಕ್ಷ ಕೋತಿಗಳನ್ನು ಹಿಡಿದು ಕಳುಹಿಸುವುದಿಲ್ಲ, ದೇಶದ ವಿವಿಧೆಡೆ ಕೋತಿಗಳ ಹಾವಳಿಯಿಂದ ಬೆಳೆ ಹಾನಿ ಸಂಭವಿಸಿದೆ ಹಾಗಾಗಿ ಬೇಡಿಕೆಗೆ ಒಪ್ಪಿದ್ದೇವೆ. ಸಂರಕ್ಷಿತ ಪ್ರದೇಶದ ಕೋತಿಗಳನ್ನು ಮುಟ್ಟುವುದೂ ಇಲ್ಲ ಎಂದು ಲಂಕಾದ ಕೃಷಿ ಸಚಿವಾಲಯದ ಹಿರಿಯ ಅಧಿಕಾರಿ ಗುಣದಾಸ ಸಮರಸಿಂಘೆ ಹೇಳಿದ್ದಾರೆ.

ಟೋಕ್ ಮಕಾಕ್ ಪ್ರಬೇಧದ ಕೋತಿಗಳಿಗೆ ಚೀನಾ ಬೇಡಿಕೆ ಇಟ್ಟಿದೆ, ಜೀವಂತ ಪ್ರಾಣಿಗಳನ್ನು ಹೊರದೇಶಕ್ಕೆ ಕಳುಹಿಸುವುದಕ್ಕೆ ಲಂಕಾದಲ್ಲಿ ನಿಷೇಧ ಇದೆ. ಆದರೆ ಮೂರು ಪ್ರಭೇದಗಳ ಕೋತಿಗಳು, ನವಿಲುಗಳು, ಕಾಡಹಂದಿಗಳು ಸೇರಿದಂತೆ ಹಲವು ವನ್ಯಜೀವಿಗಳು ಸಂರಕ್ಷಿತ ಪಟ್ಟಿಯಿಂದ ಶ್ರೀಲಂಕಾ ಕೈಬಿಟ್ಟಿದೆ. ಹಾಗಾಗಿ ಪಟ್ಟಿಯಿಂದ ಕೈಬಿಡಲಾದ ಪ್ರಾಣಿಗಳು ಕೃಷಿಭೂಮಿಯಲ್ಲಿ ಉಪದ್ರವ ಕೊಟ್ಟರೆ ರೈತರು ಅವುಗಳನ್ನು ಸಾಯಿಸಬಹುದಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!