BIG NEWS | ಸಿಟಿ ರವಿ ಅಶ್ಲೀಲ ಪದ ಬಳಸಿದ ವಿಡಿಯೋ ರಿಲೀಸ್‌ ಮಾಡಿದ ಲಕ್ಷ್ಮೀ ಹೆಬ್ಬಾಳ್ಕರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಿಜೆಪಿ ಎಂಎಲ್​ಸಿ ಸಿಟಿ ರವಿ ವಿಧಾನ ಪರಿಷತ್ ಕಲಾಪದಲ್ಲಿ ಬಳಸಿದ್ದಾರೆ ಎನ್ನಲಾದ ಅಶ್ಲೀಲ ಪದಕ್ಕೆ ಸಂಬಂಧಿಸಿದ ವಿಡಿಯೋವನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸೋಮವಾರ ಬಿಡುಗಡೆ ಮಾಡಿದ್ದಾರೆ.

ಮಾಧ್ಯಮಗಳಿಗೆ ತಮ್ಮ ಫೋನ್‌ನಿಂದ ವಿಡಿಯೋ ತೋರಿಸಿ ನಂತರ ಮಾತನಾಡಿದ್ದು, ‘ರಾಹುಲ್ ಗಾಂಧಿ ಅವರನ್ನು ನೀವು (ಸಿಟಿ ರವಿ) ಡ್ರಗ್ ಅಡಿಕ್ಟ್ ಅಂದಿದ್ದಕ್ಕೆ ನಾನು ನಿಮ್ಮ ಬಳಿ ಮೂವರು ಮುಗ್ದ ಜನರನ್ನು ಅಪಘಾತ ಮಾಡಿ ಹತ್ಯೆ ಮಾಡಿದ್ದೀರಲ್ಲವೇ, ನಿಮ್ಮನ್ನು ಕೊಲೆಗಾರ ಎನ್ನಲೇ ಎಂದಿದ್ದಕ್ಕೆ ತಾನೆ ನೀವು (ಸಿಟಿ ರವಿ) ನನಗೆ ಆ ಪದವನ್ನು ಬಳಸಿದ್ದು? ನೆನಪಿಲ್ಲವಾ? ಈಗೇನು ನಾಟಕ ಮಾಡುತ್ತಿದ್ದೀರ? ಅಬ್ಬ ಅಷ್ಟೊಂದು ದೊಡ್ಡ ಪಟ್ಟಿ ಕಟ್ಟಿಕೊಂಡು ನಾಟಕ ಮಾಡುತ್ತಿದ್ದೀರಾ? ನಿಮ್ಮನ್ನು ಮಹಿಳೆಯರು ಕ್ಷಮಿಸಲ್ಲ ಎಂದು ಹೆಬ್ಬಾಳ್ಕರ್ ಕಿಡಿ ಕಾರಿದ್ದಾರೆ.

ಈ ವಿಡಿಯೋ ಇಟ್ಟುಕೊಂಡು ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡುತ್ತೇನೆ. ನನಗೆ ನ್ಯಾಯ ಬೇಕು ಎಂದು ಹೇಳಿದ್ದಾರೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!