ಐಪಿಎಲ್​​​ನ ಮಾಜಿ ಅಧ್ಯಕ್ಷ ಲಲಿತ್​ ಮೋದಿಗೆ ಚಾಟಿ ಬೀಸಿದ ಸುಪ್ರೀಂ ಕೋರ್ಟ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಸುಪ್ರೀಂ ಕೋರ್ಟ್ ಇಂದು ​​ ಐಪಿಎಲ್​​​ನ ಮಾಜಿ ಅಧ್ಯಕ್ಷ ಲಲಿತ್​ ಮೋದಿಗೆ ಛೀಮಾರಿ ಹಾಕಿದೆ.

ಸಾಮಾಜಿಕ ಜಾಲತಾಣದಲ್ಲಿ ನ್ಯಾಯಾಂಗದ ಕುರಿತು ಟೀಕೆ ಮಾಡಿ ಪೋಸ್ಟ್​ ಮಾಡಿದ್ಧಾರೆ ಎಂಬ ಆರೋಪದ ಮೇಲೆ ಛೀಮಾರಿ ಹಾಕಿದ್ದು, ಬೇಷರತ್​ ಕ್ಷಮೆಯಾಚಿಸುವಂತೆ ​​ ಸೂಚಿಸಿದೆ.

ಲಲಿತ್​ ಮೋದಿ ಸಲ್ಲಿಸಿದ್ದ ಕೌಂಟರ್​ ಅಫಿಡೆವಿಟ್ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಂ.ಆರ್.ಷಾ, ಸಿ.ಟಿ.ರವಿಕುಮಾರ್​ ಅವರಿದ್ದ ದ್ವಿಸದಸ್ಯ ಪೀಠವು ಅವರೇನು ಕಾನೂನಿಗಿಂತ ದೊಡ್ಡವರಲ್ಲ ಎಂದು ಚಾಟಿ ಬೀಸಿದೆ.
ಸಾಮಾಜಿಕ ಜಾಲತಾಣ ಹಾಗೂ ರಾಷ್ಟ್ರೀಯ ಸುದ್ದಿ ವಾಹಿನಿಗಳಲ್ಲಿಆಡಿರುವ ಟೀಕೆ ಕುರಿತು ಕ್ಷಮೆಯಾಚಿಸುವಂತೆ ಸುಪ್ರೀಂ ಕೋರ್ಟ್​ನ ದ್ವಿಸದಸ್ಯ ಪೀಠ ತಿಳಿಸಿದೆ.

ಕ್ಷಮೆಯಾಚಿಸುವ ಮೊದಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬೇಕು ಮತ್ತು ಈ ರೀತಿ ಮುಂದಿನ ದಿನಗಳಲ್ಲಿ ಮಾಡುವುದಿಲ್ಲ ಎಂದು ನ್ಯಾಯಾಲಯದ ಮುಂದೆ ತಪ್ಪೊಪ್ಪಿಕೊಳ್ಳಬೇಕು ಎಂದು ಸೂಚಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!