ಉತ್ತರಕಾಶಿಯಲ್ಲಿ ನಿರ್ಮಾಣ ಹಂತದ ಸುರಂಗ ಮಾರ್ಗ ಕುಸಿತದ ಸ್ಥಳದಲ್ಲೇ ಭೂಕುಸಿತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಉತ್ತರಾಖಂಡದ ಉತ್ತರಕಾಶಿಯ ಚಾರ್‌ಧಾಮ್ ಮಾರ್ಗದಲ್ಲಿ ನಿರ್ಮಾಣ ಹಂತದಲ್ಲಿರುವ ಸುರಂಗ ಕುಸಿದಿದೆ, ಇಲ್ಲಿ ಸಾಕಷ್ಟು ಕಾರ್ಮಿಕರು ಸಿಲುಕಿದ್ದಾರೆ.

ಇದೀಗ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ, ಆದರೆ ಭೂಕುಸಿತವೂ ಉಂಟಾಗಿದ್ದು, ಕಾರ್ಮಿಕರ ರಕ್ಷಣೆ ಪ್ರಕ್ರಿಯೆ ವಿಳಂಬವಾಗಿದೆ.

ಆಗರ್ ಯಂತ್ರವನ್ನು ಬಳಸಿ ಪೈಪ್‌ಗಳನ್ನು ಅಳವಡಿಸಲು ಕೊರೆಯುವ ಕಾರ್ಯ ಆರಂಭವಾಗಿದ್ದು, ಇಂದು ಕಾರ್ಮಿಕರನ್ನು ಸ್ಥಳಾಂತರಿಸುವ ನಂಬಿಕೆ ಇದೆ. ನಿನ್ನೆಯಷ್ಟೇ ಭೂಕುಸಿತ ಸಂಭವಿಸಿದ್ದು, ಸುರಂಗದ ಅವಶೇಷಗಳ ಮೂಲಕ ಉಕ್ಕಿನ ಪೈಪ್‌ಗಳನ್ನು ಅಳವಡಿಸುವ ಪ್ರಯತ್ನ ಮಾಡಲಾಗುತ್ತಿಲ್ಲ.

ಇದೀಗ ಡ್ರಿಲ್ಲಿಂಗ್ ಯಂತ್ರ ಮತ್ತು ಪೈಪ್‌ಗಳು ಸ್ಥಳಕ್ಕೆ ಬಂದಿಳಿದಿದ್ದು, ಎಲ್ಲವೂ ಅಂದುಕೊಂಡಂತೆಯೇ ನಡೆದರೆ ಇಂದು ಕಾರ್ಮಿಕರನ್ನು ಸುರಕ್ಷಿತವಾಗಿ ಹೊರಕರೆಸಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!