ಹೊಸ ದಿಗಂತ ವರದಿ, ಮಂಗಳೂರು:
ಮಂಗಳೂರು- ಬೆಂಗಳೂರು ಸಂಪರ್ಕಿಸುವ ರೈಲ್ವೆ ಹಳಿಯ ಸುಬ್ರಹ್ಮಣ್ಯ- ಸಕಲೇಶಪುರ ಮಾರ್ಗದಲ್ಲಿ ಎಡಕುಮೇರಿ ಮತ್ತು ಕಡಗರವಳ್ಳಿ ನಡುವೆ ಭೂಕುಸಿತ ಸಂಭವಿಸಿದ ಹಿನ್ನೆಲೆಯಲ್ಲಿ ಈ ಮಾರ್ಗದ ಹಲವು ರೈಲುಗಳ ಪ್ರಯಾಣವನ್ನು ನಿರ್ದಿಷ್ಟ ದಿನದ ತನಕ ಪೂರ್ಣ ರದ್ದುಪಡಿಸಲಾಗಿದ್ದು, ಇನ್ನು ಕೆಲವು ರೈಲುಗಳಿಗೆ ಬದಲಿ ಮಾರ್ಗ ಸೂಚಿಸಲಾಗಿದೆ.
ಪೂರ್ಣ ರದ್ದಾದ ರೈಲು
ಜುಲೈ 27 ಮತ್ತು 28 ರಂದು ಪ್ರಯಾಣ ಆರಂಭಿಸುವ ರೈಲು ನಂ 16585 ಸರ್ ಎಂ ವಿಶ್ವೇಶ್ವರಯ್ಯ ಬೆಂಗಳೂರು ಮುರ್ಡೇಶ್ವರ ಎಕ್ಸ್‌ಪ್ರೆಸ್ .
ಜುಲೈ 28 ಮತ್ತು 29 ರಂದು ಪ್ರಯಾಣ ಆರಂಭಿಸುವ ರೈಲು ನಂ. 16586 ಮುರ್ಡೇಶ್ವರ- ಸರ್ ಎಂ ವಿಶ್ವೇಶ್ವರಯ್ಯ ಬೆಂಗಳೂರು ಎಕ್ಸ್‌ಪ್ರೆಸ್ .
ಜುಲೈ 28 ರಂದು ಪ್ರಯಾಣ ಆರಂಭಿಸುವ ರೈಲು ನಂ. 06567 ಸರ್ ಎಂ ವಿಶ್ವೇಶ್ವರಯ್ಯ ಬೆಂಗಳೂರು – ಕಾರವಾರ ಎಕ್ಸ್‌ಪ್ರೆಸ್
ಜುಲೈ 28 ರಂದು ಪ್ರಯಾಣ ಆರಂಭಿಸುವ ರೈಲು ನಂ. 06568 ಕಾರವಾರ – ಸರ್ ಎಂ ವಿಶ್ವೇಶ್ವರಯ್ಯ ಬೆಂಗಳೂರು ಎಕ್ಸ್‌ಪ್ರೆಸ್
ಜುಲೈ 27 ಮತ್ತು 28 ರಂದು ಪ್ರಯಾಣ ಆರಂಭಿಸುವ ರೈಲು ನಂ. 16595 ಕೆಎಸ್ಆರ್ ಬೆಂಗಳೂರು- ಕಾರವಾರ ಎಕ್ಸ್‌ಪ್ರೆಸ್
ಜುಲೈ 28 ಮತ್ತು 29 ರಂದು ಪ್ರಯಾಣ ಆರಂಭಿಸುವ ರೈಲು ನಂ. 16596 ಕಾರವಾರ- ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್
ಮಾರ್ಗ ಬದಲಿಸಿದ ರೈಲು
ರೈಲು ಸಂಖ್ಯೆ 16596 ಕಾರವಾರ ಕೆಎಸ್‌ಆರ್ ಬೆಂಗಳೂರು ಎಕ್ಸ್‌ಪ್ರೆಸ್ ಜುಲೈ 27 ರಂದು ಅಸ್ತಿತ್ವದಲ್ಲಿರುವ ಮಾರ್ಗ ಕಾರವಾರ, ಸುರತ್ಕಲ್, ಸುಬ್ರಹ್ಮಣ್ಯ ರಸ್ತೆ, ಸಕಲೇಶಪುರ, ಹಾಸನ, ಕೆಎಸ್‌ಆರ್ ಬೆಂಗಳೂರು ಮಾರ್ಗದ ಬದಲು ಕಾರವಾರ, ಸುರತ್ಕಲ್, ಮಂಗಳೂರು ಜಂಕ್ಷನ್ – ಶೋರ್ನೂರು, ಪಾಲಕ್ಕಾಡ್ ‘ ಪೊದನೂರ್, ಈರೋಡ್, ಸೇಲಂ, ಜೋಲಾರಪೇಡೆ ಮೂಲಕ ಪ್ರಯಾಣಿಸಿದೆ.
ರೈಲು ನಂ. 16586 ಮುರ್ಡೇಶ್ವರ- ಸರ್ ಎಂ ವಿಶ್ವೇಶ್ವರಯ್ಯ ಬೆಂಗಳೂರು ಎಕ್ಸ್‌ಪ್ರೆಸ್ ಜುಲೈ 27 ರಂದು ಅಸ್ತಿತ್ವದಲ್ಲಿರುವ ಸುಬ್ರಹ್ಮಣ್ಯ ರಸ್ತೆ, ಸಕಲೇಶಪುರ, ಹಾಸನ, ಮೈಸೂರು, ಕೆಎಸ್‌ಆರ್ ಬೆಂಗಳೂರು ಮಾರ್ಗ ಬದಲು ಮಂಗಳೂರು, ಶೋರ್ನೂರು, ಪಾಲಕ್ಕಾಡ್, ಪೊದನೂರು, ಈರೋಡ್, ಸೇಲಂ ಪೇಟೆ, ಜೋಲಾರ್‌ಪೇಟೆ ಮಾರ್ಗದಲ್ಲಿ ಪ್ರಯಾಣಿಸಿದೆ ಎಂದು ಕೊಂಕಣ ರೈಲ್ವೆ ತಿಳಿಸಿದೆ.