ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಮತ್ತು ಕಾಶ್ಮೀರದಲ್ಲಿ ಭೂಕುಸಿತ ಸಂಭವಿಸಿದ್ದು, ಇಬ್ಬರು ವೈಷ್ಣೋದೇವಿ ಯಾತ್ರಿಕರು ಸಾವನ್ನಪ್ಪಿರುವ ಘಟನೆ ನಡೆದಿದೆ.
ಇಲ್ಲಿನ ರಿಯಾಸಿ (Reasi) ಜಿಲ್ಲೆಯ ವೈಷ್ಣೋದೇವಿ ದೇಗುಲದ ಹೊಸ ಟ್ರ್ಯಾಕ್ ನಲ್ಲಿ ಈ ಘಟನೆ ಸಂಭವಿಸಿದ್ದು, ಇಬ್ಬರು ಯಾತ್ರಿಕರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭವನದಿಂದ ಮೂರು ಕಿಮೀ ದೂರದಲ್ಲಿ ಮಧ್ಯಾಹ್ನ 2:30 ಸುಮಾರಿಗೆ ಭೂಕುಸಿತ ಸಂಭವಿಸಿದ್ದು, ಓವರ್‌ಹೆಡ್ ಟ್ಯಾಂಕ್‌ನ ಕಬ್ಬಿಣದ ರಚನೆಯ ಒಂದು ಭಾಗ ಹಾನಿಯಾಗಿದ್ದು, ಅದರ ಕೆಳಗೆ ಯಾತ್ರಿಕರು ಸಿಲುಕಿಕೊಂಡಿದ್ದರು ಎಂದು ಹೇಳಿದರು.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ನಾಗರೀಕ ಆಡಳಿತ ಅಧಿಕಾರಿಗಳು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಟ್ರ್ಯಾಕಿನಿಂದ ಯಾತ್ರಿಕರ ಯಾತ್ರೆ ಸ್ಥಗಿತಗೊಳಿಸಿದ ಕೂಡಲೇ ರಕ್ಷಣಾ ಕಾರ್ಯ ಪ್ರಾರಂಭಿಸಲಾಗಿದೆ.