ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವಕಪ್ ನಲ್ಲಿ ಹ್ಯಾಟ್ರಿಕ್ ಸೋಲಿನಿಂದ ಕಂಗೆಟ್ಟಿದ್ದ ಶ್ರೀಲಂಕಾ (Srilanka) ತಂಡ ಕೊನೆಗೂ ಗೆಲುವಿನ ಖಾತೆ ತೆರೆದಿದೆ.
ನೆದರ್ಲೆಂಡ್ಸ್ ವಿರುದ್ಧ ನಡೆದ ಪಂದ್ಯದಲ್ಲಿ 5 ವಿಕೆಟ್‌ಗಳ ಜಯ ಸಾಧಿಸಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನೆದರ್ಲೆಂಡ್ಸ್ 48.2 ಓವರ್‌ಗಳಲ್ಲಿ 262 ರನ್ ಗಳಿಸಿತ್ತು. 264 ರನ್‌ಗಳ ಗುರಿ ಬೆನ್ನತ್ತಿದ್ದ ಲಂಕಾ ಪಡೆ 48.2 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 263 ರನ್ ಗಳಿಸಿ ಗೆಲುವು ಸಾಧಿಸಿತು.
ಲಂಕಾ ಪರ ಪತುಮ್ ನಿಸಂಕಾ 54 ರನ್ (52 ಎಸೆತ, 9 ಬೌಂಡರಿ), ಸದೀರ ಸಮರವಿಕ್ರಮ ಅಜೇಯ 91 (7 ಬೌಂಡರಿ, 107 ಎಸೆತ) ರನ್ ಬಾರಿಸಿದ್ರೆ, ಚರಿತ್ ಅಸಲಂಕಾ 44 ರನ್ ಮತ್ತು ಧನಂಜಯ್ ಡಿಸಿಲ್ವಾ 30 ರನ್ ಬಾರಿಸಿ ಗೆಲುವಿನ ನಗೆ ಬೀರಿದರು.