ಹೊಸದಿಗಂತ ಡಿಜಿಟಲ್ ಡೆಸ್ಕ್:
ಲ್ಯಾಪ್ ಟಾಪ್ ಸ್ಫೋಟಗೊಂಡು ಸಾಫ್ಟ್ ವೇರ್ ಇಂಜಿನಿಯರ್ ಉದ್ಯೋಗಿಯೊಬ್ಬರು ಒಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕಡಪ ಜಿಲ್ಲೆಯ ಬದ್ವೆಲ್ ನಲ್ಲಿ ನಡೆದಿದೆ. ಬದ್ವೇಲ್ನ ಮೇಕವಾರಿಪಲ್ಲಿಯ ಸುಮಲತಾ (24) ಎಂಬ ಮಹಿಳಾ ಟೆಕ್ಕಿ ಗಂಭೀರ ಗಾಯಗಳಿಂದ ಆಸ್ಪತ್ರೆ ಪಾಲಾಗಿದ್ದಾರೆ.
ಚಾರ್ಜ್ ಹಾಕಿಕೊಂಡು ಕೆಲಸ ಮಾಡುತ್ತಿರುವಾಗ ಲ್ಯಾಪ್ಟಾಪ್ನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು, ಸ್ಪೋಟಗೊಂಡಿದೆ. ಗಾಯಾಳು ಸುಮಲಯಾ ಅವರನ್ನು ಕುಟುಂಬಸ್ಥರು ಕಡಪ ಖಾಸಗಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸುತ್ತಿದ್ದಾರೆ.
ಕೊರೊನಾ ಕಾರಣದಿಂದಾಗಿ ವರ್ಕ್ ಫ್ರಮ್ ಹೋಂನಲ್ಲಿರುವ ಉದ್ಯೋಗಿಗಳು ಅತ್ಯಂತ ಜಾಗರೂಕತೆಯಿಂದ ಕೆಲಸ ಮಾಡಬೇಕಿದೆ. ಲ್ಯಾಪ್ಟಾಪ್ ಮೂಲಕ ಕೆಲಸ ಮಾಡುವ ಉದ್ಯೋಗಿಗಳು ಚಾರ್ಜ್ ಹಾಕಿ ಕೆಲಸ ಮಾಡುವುದನ್ನು ನಿಯಂತ್ರಿಸಿ ಎಂಬುದನ್ನು ಈ ಘಟನೆ ಎಚ್ಚರಿಸಿದೆ.