Monday, September 25, 2023

Latest Posts

ಚಂದ್ರನ ಮೇಲೆ ಎದುರಾದ ದೊಡ್ಡ ಕುಳಿ: ಹೊಸ ಮಾರ್ಗದಲ್ಲಿ ಪ್ರಯಾಣ ಆರಂಭಿಸಿದ ಪ್ರಗ್ಯಾನ್‌ ರೋವರ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಚಂದ್ರಯಾನ -3ರ ಪ್ರಜ್ಞಾನ್ ರೋವರ್ ಚಂದ್ರನ ಮೇಲೆಪರಿಶೋಧನೆ ನಡೆಸುತ್ತಿದ್ದು, ಇದೀಗ ಪ್ರಗ್ಯಾನ್‌ ರೋವರ್‌ಗೆ ದೊಡ್ಡ ಕುಳಿಯೊಂದು ಎದುರಾಗಿದೆ ಎಂದು ಇಸ್ರೋ ತಿಳಿಸಿದೆ .

ವಿಕ್ರಮ್‌ ಲ್ಯಾಂಡರ್‌ನ ನ್ಯಾವಿಗೇಷನ್‌ ಕ್ಯಾಮೆರಾದಿಂದ ಸೆರೆಹಿಡಿದ ಆ ಚಿತ್ರಗಳನ್ನು ಸೋಶಿಯಲ್‌ ಮೀಡಿಯಾದಲ್ಲಿ ಸೋಮವಾರ ಭಾರತೀಯ ಬಾಹ್ಯಾಕಾಶ ಸಂಸ್ಥೆ,ಹಂಚಿಕೊಂಡಿದೆ.

ಪ್ರಗ್ಯಾನ್‌ ರೋವರ್‌ ತಾನಿದ್ದ ಸ್ಥಳದಿಂದ ಕೇವಲ ಮೂರು ಮೀಟರ್‌ ದೂರದಲ್ಲಿ ದೊಡ್ಡ ಕುಳಿಯನ್ನು ಗಮನಿಸಿದೆ. ಅಂದಾಜು 4 ಮೀಟರ್‌ ಸುತ್ತಳತೆಯ ಕುಳಿ ಇದಾಗಿತ್ತು ಎಂದು ಇಸ್ರೋ ತಿಳಿಸಿದೆ.

ಆ ಬಳಿಕ ರೋವರ್‌ಗೆ ತನ್ನ ಮಾರ್ಗವನ್ನು ಬದಲಾವಣೆ ಮಾಡುವಂತೆ ಇಸ್ರೋ ಕಮಾಂಡ್‌ ಮಾಡಿತ್ತು. ಈಗ ರೋವರ್‌ ಹೊಸ ಮಾರ್ಗದಲ್ಲಿ ಪ್ರಯಾಣ ಮಾಡುತ್ತಿದೆ’ ಎಂದು ಇಸ್ರೋ ಟ್ವೀಟ್‌ ಮಾಡಿದೆ.

ಆರು-ಚಕ್ರಗಳ, ಸೌರ-ಚಾಲಿತ ರೋವರ್ ಚಂದ್ರನ ಮೇಲೆ ಹಿಂದೆ ಎಂದೂ ಮ್ಯಾಪ್ ಮಾಡದ ಪ್ರದೇಶದ ಸುತ್ತಲೂ ಸುತ್ತುತ್ತದೆ ಮತ್ತು ಅದರ ಎರಡು ವಾರಗಳ ಜೀವಿತಾವಧಿಯಲ್ಲಿ ಚಿತ್ರಗಳು ಮತ್ತು ವೈಜ್ಞಾನಿಕ ಡೇಟಾವನ್ನು ಭೂಮಿಗೆ ರವಾನಿಸುತ್ತದೆ. ಒಂದು ಚಂದ್ರನ ದಿನ ಪೂರ್ಣಗೊಳ್ಳಲು ಕೇವಲ 10 ದಿನಗಳು ಮಾತ್ರ ಉಳಿದಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!