Wednesday, February 28, 2024

ಕಳೆದ ಶತಮಾನದ ‘ಮಹಾಪುರುಷ’ ಗಾಂಧಿ, ಈ ಶತಮಾನದ ‘ಯುಗಪುರುಷ’ ಪ್ರಧಾನಿ ಮೋದಿ: ಉಪ ರಾಷ್ಟ್ರಪತಿ ಧನಕರ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಳೆದ ಶತಮಾನದ ‘ಮಹಾಪುರುಷ’ ಮಹಾತ್ಮ ಗಾಂಧಿ ಆದ್ರೆ ಈ ಶತಮಾನದ ‘ಯುಗಪುರುಷ’ ಪ್ರಧಾನಿ ನರೇಂದ್ರ ಮೋದಿ ಎಂದು ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌ ಬಣ್ಣಿಸಿದ್ದಾರೆ.

ಜೈನ ಧರ್ಮಗುರು ಹಾಗೂ ತತ್ವಜ್ಞಾನಿ ಶ್ರೀಮದ್ ರಾಜಚಂದ್ರಜೀ ಅವರ ಜನ್ಮದಿನಾಚರಣೆ ಸಮಾರಂಭದಲ್ಲಿ ಮಾತನಾಡಿದ ಅವರು, ನಾನು ನಿಮಗೆ ಒಂದು ವಿಷಯ ಹೇಳಲು ಬಯಸುತ್ತೇನೆ. ಕಳೆದ ಶತಮಾನದ ಮಹಾಪುರುಷ ಮಹಾತ್ಮಾ ಗಾಂಧಿ. ನರೇಂದ್ರ ಮೋದಿ ಈ ಶತಮಾನದ ಯುಗಪುರುಷ ಎಂದು ಹಾಡಿ ಹೊಗಳಿದ್ದಾರೆ.

ಮಹಾತ್ಮ ಗಾಂಧಿಯವರು ಸತ್ಯಾಗ್ರಹ ಮತ್ತು ಅಹಿಂಸೆಯ ಮೂಲಕ ನಮ್ಮನ್ನು ಬ್ರಿಟಿಷರ ಗುಲಾಮಗಿರಿಯಿಂದ ಮುಕ್ತಗೊಳಿಸಿದರು. ಭಾರತದ ಯಶಸ್ವಿ ಪ್ರಧಾನಿ ನರೇಂದ್ರ ಮೋದಿ ಅವರು ನಾವು ಯಾವಾಗಲೂ ಇರಬೇಕೆಂದು ಬಯಸಿದ ಹಾದಿಗೆ ನಮ್ಮನ್ನು ಕೊಂಡೊಯ್ದಿದ್ದಾರೆ ಎಂದು ಹೇಳಿದ್ದಾರೆ.

1867 ರಲ್ಲಿ ಗುಜರಾತ್‌ನಲ್ಲಿ ರಾಜ್‌ಚಂದ್ರಜಿ ಜನಿಸಿದರು. 1901 ರಲ್ಲಿ ನಿಧನರಾದರು. ಜೈನ ಧರ್ಮದ ಬೋಧನೆಗಳು ಮತ್ತು ಮಹಾತ್ಮ ಗಾಂಧಿಯವರಿಗೆ ಅವರ ಆಧ್ಯಾತ್ಮಿಕ ಮಾರ್ಗದರ್ಶನಕ್ಕಾಗಿ ಹೆಸರುವಾಸಿಯಾಗಿದ್ದಾರೆ ಎಂದು ಧನಕರ್‌ ಸ್ಮರಿಸಿದ್ದಾರೆ.

ಇಬ್ಬರು ಮಹಾನ್ ವ್ಯಕ್ತಿಗಳಾದ ರಾಷ್ಟ್ರಪಿತ ಮಹಾತ್ಮ ಗಾಂಧಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರ ನಡುವೆ ಒಂದು ವಿಷಯ ಸಾಮಾನ್ಯವಾಗಿದೆ. ಅವರು ಶ್ರೀಮದ್ ರಾಜ್‌ಚಂದ್ರಜಿ ಅವರನ್ನು ಗೌರವದಿಂದ ಪ್ರತಿಬಿಂಬಿಸಿದ್ದಾರೆ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!