ಹೊಸದಿಗಂತ ವರದಿ ಹಾವೇರಿ:
ಕಳೆದ ವಿಧಾನಸಭೆ ಚುನಾವಣೆ ವೇಳೆಯಲ್ಲಿ ಸ್ವೀಪ್ ಕಾರ್ಯಕ್ರಮದ ಚುನಾವಣಾ ರಾಯಭಾರಿ ಆಗಿದ್ದ ಗಾಯಕ ಹನುಮಂತ ಲಮಾಣಿ ಈ ಬಾರಿಯ ಉಪ ಚುನಾವಣೆಯಲ್ಲಿ ಮತದಾನದಿಂದ ದೂರ ಉಳಿದು ಗೈರಾಗಿದ್ದಾರೆ.
ಅವರ ತಂದೆ ಮೇಘಪ್ಪ, ತಾಯಿ ಶೀಲವ್ವ ಹಾಗೂ ಸಹೋದರಿ ಅವರು ಮತಗಟ್ಟೆಗೆ ಬಂದು ಮತದಾನ ಮಾಡಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹನುಮಂತ ಅವರು ಚುನಾವಣೆ ರಾಯಭಾರಿ ಆಗಿ ಮತದಾನ ಜಾಗೃತಿ ಮೂಡಿಸಿದ್ದರು. ಆದರೆ ಈ ಬಾರಿ ಗೈರಾಗಿದ್ದಾರೆ. ಚಿಲ್ಲೂರು ಬಡ್ನಿಯಲ್ಲಿರುವ ಸರ್ಕಾರಿ ಶಾಲೆಯಲ್ಲಿನ ಮತಗಟ್ಟೆ 117 ರಲ್ಲಿ ಹನುಮಂತನ ಮತವಿದೆ. ಆದರೆ ಈ ಬಾರಿ ಅವರು ‘ಬಿಗ್‌ಬಾಸ್’ ರಿಯಾಲಿಟಿ ಶೋ ಮನೆಯಲ್ಲಿದ್ದಾರೆ. ಹೀಗಾಗಿ ಮತದಾನ ಮಾಡಲು ಬಾರದೇ ಗೈರಾಗಿದ್ದಾರೆ.
ಹನುಮಂತ ಬಿಗ್‌ಬಾಸ್‌ನಲ್ಲಿ ಇದ್ದಾನೆ. ಅವನನ್ನು ಸಂಪರ್ಕಿಸಲು ನಮಗೆ ಆಗುವುದಿಲ್ಲ. ನಾವಷ್ಟೇ ಬಂದು ಮತದಾನ ಮಾಡಿದ್ದೇವೆ’ ಹನುಮಂತ ಅವರ ತಂದೆ ಮೇಘಪ್ಪ ಹೇಳಿದರು.
ಕಳೆದ ಚುನಾವಣೆ ಮತದಾನದ ಜಾಗೃತಿ ಮೂಡಿಸಿದ್ದ ಹನುಮಂತನನ್ನು ಈ ಭಾರಿ ಜಿಲ್ಲಾಡಳಿತ ಮರೆತಿದೆ. ಈ ಬಾರಿಯೂ ಮತದಾನದ ಜಾಗೃತಿ ಮೂಡಿಸಬೇಕಿತ್ತು ಎಂಬ ಮಾತುಗಳು ಕೇಳಿ ಬಂದಿವೆ.