ಡ್ರೋನ್‌ ಡ್ರಾಪಿಂಗ್:‌ ಶಸ್ತ್ರಾಸ್ತ್ರ, ಮದ್ದು-ಗುಂಡು ವಶಪಡಿಸಿಕೊಂಡ ಭದ್ರತಾ ಪಡೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಪಂಜಾಬ್‌ನ ಗುರುದಾಸ್‌ಪುರದಲ್ಲಿ ಪಾಕಿಸ್ತಾನಿ ಡ್ರೋನ್ ಅನ್ನು ಭದ್ರತಾ ಪಡೆ ನಾಶಗೊಳಿಸಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿತು.

ಕಳೆದ ರಾತ್ರಿ BSF ಪಡೆ ಪಾಕ್ ಕಡೆಯಿಂದ ಬಂದ ಶಂಕಿತ ಡ್ರೋನ್‌ನ ಗುನುಗುವ ಶಬ್ದ ಕೇಳಿ ಅದರ ಮೇಲೆ ಗುಂಡು ಹಾರಿಸಿದೆ.  ಹುಡುಕಾಟದ ಸಮಯದಲ್ಲಿ, ಗುರುದಾಸ್‌ಪುರದ ಉಂಚಾ ಟಕಾಲದಲ್ಲಿ ಪ್ಯಾಕೆಟ್ ಪತ್ತೆಯಾಗಿದೆ. ಪ್ಯಾಕೆಟ್‌ನಲ್ಲಿ 4 ಪಿಸ್ತೂಲ್‌ಗಳು (ಚೀನಾದಲ್ಲಿ ತಯಾರಿಸಲ್ಪಟ್ಟಿದೆ), 8 ಮ್ಯಾಗಜೀನ್‌ಗಳು ಮತ್ತು 47 ಸುತ್ತು ಗುಂಡು ಕಂಡುಬಂದಿವೆ.

ಈ ಕುರಿತು ಮಾಹಿತಿ ನೀಡಿದ ಪಂಜಾಬ್‌ನ ಬಿಎಸ್‌ಎಫ್‌ ಅಧಿಕಾರಿ  17-18 ಜನವರಿ 2023 ರ ಮಂಜಿನ ಮಧ್ಯರಾತ್ರಿಯಲ್ಲಿ, ಗಡಿ ಭದ್ರತಾ ಪಡೆಗಳು ಕಳ್ಳಸಾಗಣೆದಾರರ ಅಕ್ರಮ ವಿನ್ಯಾಸವನ್ನು ವಿಫಲಗೊಳಿಸಿ  ಚೀನಾ ನಿರ್ಮಿತ 4 ಪಿಸ್ತೂಲ್‌ಗಳು, 8 ಮ್ಯಾಗಜೀನ್‌ಗಳು ಮತ್ತು 47 ಲೈವ್ ರೌಂಡ್‌ಗಳನ್ನು ಪಂಜಾಬ್‌ನ ಉಂಚಾ ಟಕಲಾಸ್‌ಪುರ ಗ್ರಾಮದಲ್ಲಿ ಪಾಕಿಸ್ತಾನಿ ಡ್ರೋನ್‌ನಿಂದ ವಶಪಡಿಸಿಕೊಂಡಿದ್ದಾಗಿ ಎಂದು ಸ್ಪಷ್ಟಪಡಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!