ಹೊಸದಿಗಂತ ಡಿಜಿಟಲ್ ಡೆಸ್ಕ್:
ವಿಶ್ವವಿಖ್ಯಾತ ದಸರಾ ಪ್ರಯುಕ್ತ ಗಜಪಡೆಯ ಆನೆ ಧನಂಜಯ ಮತ್ತೊಂದು ಆನೆ ಕಂಜನ್ ಮೇಲೆ ಏಕಾಏಕಿ ದಾಳಿ ನಡೆಸಿದ ಘಟನೆ ಶುಕ್ರವಾರ ರಾತ್ರಿ ನಡೆದಿದೆ. ದಾಳಿಯಿಂದ ಕಂಜನ್ ಬೆಚ್ಚಿಬಿದ್ದಿದ್ದು, ಆನೆ ಅರಮನೆ ಮೈದಾನದಿಂದ ಓಡಿ ಹೋಗಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಆನೆಯನ್ನು ಹಿಡಿಯಲು ಪ್ರಯತ್ನಿಸುತ್ತಿರುವಾಗ ಕಂಜನ್ ತನ್ನ ಕಾಲುಗಳ ಸರಪಳಿಯಿಂದ ತನ್ನನ್ನು ತಾನು ಬಿಡಿಸಿಕೊಂಡು ಅರಮನೆಯಿಂದ ಹೊರಹೋಗುವುದನ್ನು ವೀಡಿಯೊ ತೋರಿಸುತ್ತದೆ. ಮಹೇಂದ್ರ ಆನೆಯು ಕಂಜನ್ನನ್ನು ನಿಯಂತ್ರಿಸಲು ಹಿಂದಿನಿಂದ ಓಡಿದಿದೆ. ಆನೆ ಓಡುತ್ತಿರುವುದನ್ನು ಕಂಡು ಜನರು ದಿಕ್ಕಾಪಾಲಾಗಿ ಓಡಿದ್ದಾರೆ.