ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಮ್ಮು ಕಾಶ್ಮೀರದಲ್ಲಿ ಮತ್ತೆ ಪಾಕಿಸ್ತಾನದಿಂದ ಗುಂಡಿನ ದಾಳಿ ಶುರುವಾಗಿದ್ದು, ಕಾಶ್ಮೀರದ ಉರಿ, ಪೂಂಚ್ ಭಾಗದಲ್ಲಿ ಡ್ರೋನ್,ಶೆಲ್ ದಾಳಿ ಗುಂಡಿನ ದಾಳಿ ನಡೆಸುತ್ತಿದೆ.
ಜಮ್ಮು, ಸಾಂಬಾ (ಜಮ್ಮು ಮತ್ತು ಕಾಶ್ಮೀರ), ಪಠಾಣ್ ಕೋಟ್ ಮತ್ತು ಫಿರೋಜ್ ಪುರ್(ಪಂಜಾಬ್), ರಾಜಸ್ತಾನದ ಪ್ರೋಖಾನ್ ನಲ್ಲಿ ಸಹಿತ ಒಟ್ಟು 7 ಕಡೆಗಳಲ್ಲಿ ಡ್ರೋನ್ ದಾಳಿಗೆ ಪಾಕ್ ಯತ್ನಿಸಿದ್ದು, ಆದ್ರೆ ಪಾಕ್ ದಾಳಿಯನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ.
ಜಮ್ಮು ನಗರದಲ್ಲಿ ಶುಕ್ರವಾರ ರಾತ್ರಿ ಸ್ಫೋಟದ ಸದ್ದು ಕೇಳಿ ಬಂದ ಹಿನ್ನೆಲೆಯಲ್ಲಿ ಸೈರನ್ ಮೊಳಗಿದ್ದು, ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ. ಸ್ಫೋಟದ ಸದ್ದು ಕೇಳಿರುವುದನ್ನು ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಖಚಿತಪಡಿಸಿದ್ದಾರೆ. ಸದ್ಯ ಜಮ್ಮುವಿನಲ್ಲಿ ಬ್ಲ್ಯಾಕ್‌ಔಟ್ ಘೋಷಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.