ಸಂಗಾತಿಯ ಜೊತೆ ಸಣ್ಣ ಪುಟ್ಟ ಸಮಸ್ಯೆ ಇದ್ದೆ ಇರುತ್ತದೆ. ಆ ಸಮಸ್ಯೆಗಳನ್ನು ಸಮಾಧಾನವಾಗಿ ಮಾತಾಡಿ ಪರಿಹರಿಸಿಕೊಳ್ಳಬೇಕು. ಆದರೆ ಕೆಲ ತಪ್ಪುಗಳನ್ನು ಮಾಡುವ ಮೂಲಕ ಸಣ್ಣ ಸಮಸ್ಯೆಯೂ ದೊಡ್ಡದಾಗುತ್ತದೆ. ಇವತ್ತು ನಿಮ್ಮ ಸಂಗತಿ ಜೊತೆಗೆ ಲೈಫ್ ಚನ್ನಾಗಿರ್ಬೇಕು ಅಂತಿದ್ರೆ ಈ ತಪ್ಪುಗಳನ್ನು ಮಾಡೋಕೆ ಹೋಗ್ಬೇಡಿ.
ಹಳೆಯ ವಿಷಯಗಳನ್ನು ಇಟ್ಟುಕೊಳ್ಳುವುದು
ಹಳೆಯ ವಿಷಯಗಳನ್ನು ಇಟ್ಟುಕೊಂಡು ಸಂಬಂಧದಲ್ಲಿ ದ್ವೇಷವನ್ನು ಬೆಳೆಸಿಕೊಳ್ಳುವುದು ಒಳ್ಳೆಯದಲ್ಲ. ಇದು ನೋವು, ಕೋಪ ಹೆಚ್ಚಿಸುತ್ತದೆ.
ಪರಸ್ಪರ ಗೌರವ
ಸಂಬಂಧದಲ್ಲಿ ಪರಸ್ಪರ ಗೌರವ ಬಹಳ ಮುಖ್ಯವಾಗುತ್ತದೆ. ಇತರರ ಅಭಿಪ್ರಾಯಗಳಿಗೆ ಆದ್ಯತೆ ನೀಡಬೇಕು. ಆಗ ಯಾವುದೇ ತೊಂದರೆಗಳು ಬರುವುದಿಲ್ಲ.
ಸಂಗತಿಯನ್ನು ಹೋಲಿಕೆ ಮಾಡುವುದು
ನಿಮ್ಮ ಸಂಗಾತಿಯನ್ನು ಹಿಂದೆ ಸಂಬಂಧದಲ್ಲಿದ್ದ ವ್ಯಕ್ತಿಯ ಜೊತೆ ಹೋಲಿಸಬೇಡಿ. ಇದರಿಂದ ನಿಮ್ಮ ಸಂಗಾತಿಗೆ ನೋವಾಗುತ್ತದೆ. ಆಗಾಗ ಹೋಲಿಕೆಗಳನ್ನು ಮಾಡಿದರೆ ಅವರು ಬದಲಾಗಿಬಿಡುತ್ತಾರೆ. ನಿಮ್ಮ ಮೇಲಿನ ಗೌರವ ಕಳೆದುಕೊಳ್ಳುತ್ತಾರೆ.
ದೈಹಿಕ ಅಥವಾ ಮಾನಸಿಕ ಹಿಂಸೆ
ಸಂಬಂಧದಲ್ಲಿ ಜಗಳಗಳು ಮತ್ತು ಭಿನ್ನಾಭಿಪ್ರಾಯಗಳು ಸಾಮಾನ್ಯ. ಆದರೆ ನಿಯಂತ್ರಣ ಕಳೆದುಕೊಳ್ಳುವುದು, ದೈಹಿಕ ಅಥವಾ ಮಾನಸಿಕ ಹಿಂಸೆ ನೀಡುವುದು ಸರಿಯಲ್ಲ. ಇದು ಸಂಗಾತಿಯು ನಿಮ್ಮ ಮೇಲೆ ನಂಬಿಕೆ ಮತ್ತು ಆತ್ಮವಿಶ್ವಾಸವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ.
ಸಂಗಾತಿಯ ಕುರಿತು ಅನುಮಾನ ಬೇಡ
ನಿಮ್ಮ ಸಂಗಾತಿಯ ಫೋನ್ ಅಥವಾ ಇತರ ಸಾಧನಗಳನ್ನು ಅವರಿಗೆ ತಿಳಿಯದೆ ಪರಿಶೀಲಿಸಬೇಡಿ. ನಿಮ್ಮ ಸಂಗಾತಿಯ ಗೌಪ್ಯತೆಯನ್ನು ಗೌರವಿಸಿ. ಇದು ನಂಬಿಕೆಯ ಕೊರತೆ ಉಂಟು ಮಾಡುತ್ತದೆ.