LATEST UPDATE | ಜಮ್ಮು ಏರ್‌ಪೋರ್ಟ್ ಗುರಿಯಾಗಿಸಿ ಪಾಕ್ ಸತತ ದಾಳಿ: ಕ್ಷಿಪಣಿ ಪುಡಿಗಟ್ಟಿದ ಸೇನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತೀಯ ಸೇನೆಯಿಂದ ಸತತ ಏಟು ತಿಂದರೂ ಬುದ್ದಿ ಕಲಿಯದ ಪಾಕಿಸ್ತಾನ ಈಗ ಜಮ್ಮುವಿನ ವಿಮಾನ ನಿಲ್ದಾಣ ಗುರಿಯಾಗಿಸಿ ಎಂಟು ಕ್ಷಿಪಣಿ ದಾಳಿ ನಡೆಸಿದೆ.

ಈ ಎಲ್ಲಾ ಕ್ಷಿಪಣಿಗಳನ್ನು ಭಾರತೀಯ ಸೇನೆ ಹೊಡೆದುರುಳಿಸಿದ್ದು, ದಾಳಿಗೆ ತಕ್ಕ ಪ್ರತ್ಯುತ್ತರ ನೀಡಿದೆ. ಜಮ್ಮುವಿನ ವಿಮಾನ ನಿಲ್ದಾಣವಲ್ಲದೆ ಅಲ್ಲಿನ ವಾಯುನೆಲೆ ಸಹಿತ ಹಲವು ಪ್ರದೇಶಗಳನ್ನು ಪಾಕ್ ಟಾರ್ಗೆಟ್ ಮಾಡಿದ್ದು, ಸತತವಾಗಿ ಕ್ಷಿಪಣಿ ದಾಳಿ ನಡೆಸಿತ್ತು. ಆದರೆ ಇದನ್ನು ಪುಡಿಗಟ್ಟುವಲ್ಲಿ ಭಾರತದ ಎಸ್ ೪೦೦ ಯಶಸ್ವಿಯಾಗಿದೆ.

ಈ ನಡುವೆ ಜಮ್ಮು-ಕಾಶ್ಮೀರದ ಸಾಂಬಾದಲ್ಲಿ ಪಾಕಿಸ್ತಾನ ಸೇನೆ ಭಾರೀ ಗುಂಡಿನ ದಾಳಿ ನಡೆಸುತ್ತಿದೆ. ಜಮ್ಮುವಿನ ವಾಯುನೆಲೆ ಗುರಿಯಾಗಿಸಿ ದಾಳಿ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!