Tuesday, March 21, 2023

Latest Posts

ಕುಡಿದು ವಾಹನ ಚಲಾಯಿಸಿದರೆ ಆ ವಾಹನ ನೇರವಾಗಿ ಉಕ್ರೇನ್‌ ಯುದ್ಧಭೂಮಿಗೆ ರವಾನೆ! 

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕುಡಿದು ವಾಹನ ಚಲಾಯಿಸಿದರೆ ಪೊಲೀಸರು ದಂಡ ಹಾಕೋದು, ವಾಹನ ಜಪ್ತಿ ಮಾಡೋದು ಕಾಮನ್.‌ ಆದರೆ ಇದೀಗ ಪೊಲೀಸರು ಜಸ್ಟ್‌ ಫಾರ್‌ ಎ ಚೇಜ್‌ ಅನ್ನೋ ಹಾಎಗ ಕುಡಿದು ವಾಹನ ಓಡಿಸಿದರೆ ಅಧಿಕಾರಿಗಳು ಆ ವಾಹನವನ್ನು ಉಕ್ರೇನ್ ಯುದ್ಧಭೂಮಿಗೆ ಸ್ಥಳಾಂತರಿಸುತ್ತಾರೆ. ಹೌದು ರೀ ಇದು ನಿಜ. ಆದರೆ, ಇದು ನಮ್ಮ ಭಾರತದಲ್ಲಲ್ಲ ಬಿಡಿ. ಯುರೋಪ್‌ನ ಲಾಟ್ವಿಯಾದಲ್ಲಿ. ಅಲ್ಲಿ ಕುಡಿದು ವಾಹನ ಚಲಾಯಿಸಿದರೆ, ಅಧಿಕಾರಿಗಳು ಅವರ ವಾಹನಗಳನ್ನು ವಶಪಡಿಸಿಕೊಂಡು ಉಕ್ರೇನ್‌ನ ಸೈನಿಕರಿಗೆ ಕಳಿಸುತ್ತಾರೆ. ಇದೊಂದು ವಿಚಿತ್ರ ಶಿಕ್ಷೆ ಎನ್ನುತ್ತಾರೆ ಲಾಟ್ವಿಯನ್ ಅಧಿಕಾರಿಗಳು. ಇಲ್ಲಿಯವರೆಗೆ, ಲಟ್ವಿಯನ್ ಅಧಿಕಾರಿಗಳು 1,200 ಕ್ಕೂ ಹೆಚ್ಚು ವಾಹನಗಳನ್ನು ಉಕ್ರೇನ್‌ಗೆ ಸಾಗಿಸಿದ್ದಾರೆ. ಉಕ್ರೇನ್ ಸೇನೆಯು ಆ ವಾಹನಗಳನ್ನು ತಮ್ಮ ಅಗತ್ಯಗಳಿಗಾಗಿ ಬಳಸುತ್ತಿದೆ ಎಂದರು.

ಉತ್ತರ ಯುರೋಪಿನ ಬಾಲ್ಟಿಕ್ ಸಮುದ್ರದ ಕರಾವಳಿಯಲ್ಲಿರುವ ಲಾಟ್ವಿಯಾದಲ್ಲಿ ಅಧಿಕಾರಿಗಳು ಒಂದಕ್ಕಿಂತ ಹೆಚ್ಚು ಬಾರಿ ಕುಡಿದು ವಾಹನ ಚಲಾಯಿಸುವಾಗ ಸಿಕ್ಕಿಬಿದ್ದವರಿಗೆ ಈ ಶಿಕ್ಷೆ ವಿಧಿಸುತ್ತಿದ್ದಾರೆ. ಲಾಟ್ವಿಯನ್ ಅಧಿಕಾರಿಗಳು ವಿಧಿಸಿದ ಈ ನವೀನ ಶಿಕ್ಷೆಗೆ ಡ್ರಗ್ ವ್ಯಸನಿಗಳು ಸ್ವಲ್ಪಮಟ್ಟಿಗೆ ಕಡಿಮೆಯಾಗಿದ್ದಾರಂತೆ.

ಲಾಟ್ವಿಯಾದಲ್ಲಿನ ಹೊಸ ನಿಯಮಗಳ ಪ್ರಕಾರ, ಎರಡು ತಿಂಗಳ ಅವಧಿಯಲ್ಲಿ 0.15 ಪ್ರತಿಶತಕ್ಕಿಂತ ಹೆಚ್ಚು ಆಲ್ಕೋಹಾಲ್ ಶೇಕಡಾವಾರು ಹೊಂದಿರುವ ಚಾಲಕ ಸಿಕ್ಕಿಬಿದ್ದರೆ ಅಧಿಕಾರಿಗಳು ಈ ವಿನೂತನ ಶಿಕ್ಷೆಗಳನ್ನು ಜಾರಿಗೊಳಿಸುತ್ತಿದ್ದಾರೆ. ವಶಪಡಿಸಿಕೊಂಡ ವಾಹನಗಳನ್ನು ಝೈಡಾಟ್ ಎನ್ವಿ ಎಂಬ ಚಾರಿಟಿಯ ಸಹಾಯದಿಂದ ಉಕ್ರೇನ್‌ಗೆ ಕಳುಹಿಸಲಾಗುತ್ತಿದೆ. ಉಕ್ರೇನ್ ಸೈನ್ಯವು ಅವರ ಅಗತ್ಯಗಳಿಗೆ ಅನುಗುಣವಾಗಿ ಅವುಗಳನ್ನು ಬಳಸುತ್ತಿದೆ. ಉಕ್ರೇನಿಯನ್ ಸೈನ್ಯದ ಮೇಲೆ ರಷ್ಯನ್ ದಾಳಿ ಮಾಡುವಾಗ ಸಾವಿರಾರು ವಾಹನಗಳು ಧ್ವಂಸಗೊಂಡಿವೆ. ಸುಂದರವಾದ ಉಕ್ರೇನ್ ಮರುಭೂಮಿಯಂತೆ ಕಾಣುತ್ತದೆ. ಎಲ್ಲಿ ನೋಡಿದರೂ ದಾಳಿಯಲ್ಲಿ ನಾಶವಾದ ಕಟ್ಟಡಗಳ ಅವಶೇಷಗಳನ್ನು ಕಾಣಬಹುದು. ಅಂತಹ ಸಮಯದಲ್ಲಿ, ಉಕ್ರೇನಿಯನ್ ಸೈನ್ಯಕ್ಕೆ ಲಾಟ್ವಿಯನ್ ಅಧಿಕಾರಿಗಳು ಕಳುಹಿಸಿದ ವಾಹನಗಳು ಸ್ವಲ್ಪಮಟ್ಟಿಗೆ ಉಪಯುಕ್ತವಾಗಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!