ದಿಗಂತ ವರದಿ ಹುಬ್ಬಳ್ಳಿ:
‘ಹುಬ್ಬಳ್ಳಿ ಗಿಚ್ಚ ಐತಿ’ ಹಾಡಿನ ಬಿಡುಗಡೆ ಸಮಾರಂಭ ಮಾ.5 ರಂದು ಗೋಕುಲ ರಸ್ತೆಯ ಕೆ.ಎಲ್.ಇ ಐಟಿಯಲ್ಲಿ ಬೆಳಿಗ್ಗೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ರೆಡಿಯೋ ಜಾಕಿ ಮಾಹಿ (ಮಹೇಶ ಸುಭಾಷ್) ಹೇಳಿದರು.
ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು 2018 ಸೆಪ್ಟೆಂಬರ್ 24 ರಂದು ಉತ್ತರ ಕರ್ನಾಟಕದ ಪ್ರಥಮ ಎಫ್.ಎಂ.ರೇಡಿಯೋ ಸ್ಟೇಷನ್ ನಲ್ಲಿ ರೆಡಿಯೋ ಜಾಕಿಯಾಗಿ ಮೊದಲ ಬಾರಿಗೆ ಮನದಾಳದಿಂದ ಹೇಳಿದ ಪದ ಹುಬ್ಬಳ್ಳಿ ಗಿಚ್ಚ್ ಐತಿ… ನಮ್ಮಂದಿಯಾಗ ಕಿಚ್ಚ್ ಐತಿ, ಎಂಬ ನುಡಿ ಜನರ ಭಾವನೆ ಮರೆಯಬಾರದು ಎಂಬ ಉದ್ದೇಶದಿಂದ ಹುಬ್ಬಳ್ಳಿ ಗಿಚ್ಚ್ ಐತಿ… ಎಂಬ ವಿಡಿಯೋ ಹಾಡನ್ನು ಮಾಡಲಾಗಿದೆ ಎಂದರು.
ಈ ಹಾಡನ್ನು ಶಾಸಕ ಅರವಿಂದ ಬೆಲ್ಲದ ಬಿಡುಗಡೆಗೊಳಿಸಲಿದ್ದು, ಅಂದು ಎಆರ್ ಸಿ ಮ್ಯೂಸಿಕ್ ಕನ್ನಡದ ಯೂಟ್ಯೂಬ್ ಚಾನೆಲ್ ನಲ್ಲಿ ನೋಡಬಹುದು. ಈ ವಿಡಿಯೋ ಹಾಡಿಗೆ ಪ್ರಮೋದ್ ಸ್ಟೀಪನ್ ಸಂಗೀತ ನೀಡಿದ್ದು, ಛಾಯಾಗ್ರಹಣ ಕಿರಣ ಬಾಕಳೆ ಮಾಡಿದ್ದಾರೆ. ಹುಬ್ಬಳ್ಳಿಯ ಪ್ರಮುಖ ಸ್ಥಳಗಳಲ್ಲಿ ಚಿತ್ರಿಕರಣ ಮಾಡಲಾಗಿದ್ದು, ಹಲವಾರು ಗಣ್ಯಮಾನ್ಯರು ವಿಡಿಯೋ ಹಾಡಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹಾಡು ಪ್ರತಿಯೊಬ್ಬ ಹುಬ್ಬಳ್ಳಿಗರಿಗೆ ಇಷ್ಟ ಆಗಲಿದೆ ಎಂದು ಹೇಳಿದರು. ಹಾಡಿನ ಬಿಡುಗಡೆ ಜೊತೆಗೆ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ 10 ಸಾಧಕರಿಗೆ ಸನ್ಮಾನಿಸಲಾಗುವುದು ಎಂದು ತಿಳಿಸಿದರು. ಭವರಲಾಲ್ ಆರ್ಯ, ಕಿರಣ ಬಾಕಳೆ ಸೇರಿದಂತೆ ಮುಂತಾದವರು ಇದ್ದರು.