ಯಶ್‌ ಅಭಿನಯದ ‘ಕೆಜಿಎಫ್‌ 2’ ಟ್ರೈಲರ್‌ ರಿಲೀಸ್‌ ಡೇಟ್‌ ಅನೌನ್ಸ್!

 

ಹೊಸದಿಗಂತ ಡಿಜಿಟಲ್ ಡೆಸ್ಕ್:
ಯಶ್​ ನಟನೆಯ ‘ಕೆಜಿಎಫ್​: 2 ಚಿತ್ರದ ಬಿಡುಗಡೆಗೆ ವಿಶ್ವದಾದ್ಯಂತ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಈ ನಡುವೆ ಚಿತ್ರತಂಡ ಹೊಸ ಅಪ್ಡೇಟ್‌ ನೀಡಿದ್ದು, ಚಿತ್ರದ ಟ್ರೈಲರ್‌ ಬಿಡುಗಡೆಗೆ ದಿನಾಂಕ ನಿಗದಿ ಮಾಡಿದೆ.
ಮಾರ್ಚ್​ 27ರಂದು ‘ಕೆಜಿಎಫ್​ 2’ ಟ್ರೇಲರ್​ ಲಾಂಚ್​ ಆಗಲಿದೆ. ಈ ಕುರಿತು ಚಿತ್ರದ ನಿರ್ದೇಶಕ ಪ್ರಶಾಂತ್‌ ನೀಲ್‌ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಹಿತಿ ನೀಡಿದ್ದು, ಚಂಡಮಾರುತದ ಮೊದಲು ಯಾವಾಗಲೂ ಗುಡುಗು ಇರುತ್ತದೆ!. ಕೆಜಿಎಫ್‌: 2 ಟ್ರೈಲರ್‌ ಮಾ.27 ರಂದು ಸಂಜೆ 6.40ಕ್ಕೆ ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಮಲೆಯಾಳಂ ಭಾಷೆಗಳಲ್ಲಿ ಬಿಡುಗಡೆ ಕಾಣಲಿದೆ ಎಂದು ಬರೆದುಕೊಂಡಿದ್ದಾರೆ.
2018 ರಲ್ಲಿ ರಿಲೀಸ್‌ ಆಗಿದ್ದ ಕೆಜಿಎಫ್‌: ಚಾಪ್ಟರ್‌ 1 ಭಾರತೀಯ ಸಿನಿರಂಗದಲ್ಲಿ ಹೊಸ ಸಂಚಲನ ಹುಟ್ಟುಹಾಕಿತ್ತು. ಕನ್ನಡ ಚಿತ್ರರಂಗದ ಖ್ಯಾತಿಯನ್ನು ಮುಗಿಲೆತ್ತರಕ್ಕೆ ಕೊಂಡೊಯ್ದಿತ್ತು. ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್‌ ನಡಿ ನಿರ್ಮಾಣವಾಗುತ್ತಿರುವ ಚಿತ್ರದಲ್ಲಿ ನಟ ಯಶ್‌ ಅವರೊಂದಿಗೆ ಪ್ರಕಾಶ್‌ ರಾಜ್‌, ಬಾಲಿವುಡ್‌ ನ ಸಂಜಯ್‌ ದತ್‌, ರವಿನಾ ಟಂಡನ್‌, ತೆಲುಗು ನಟ ರಾವ್‌ ರಮೇಶ್‌ ಸೇರಿದಂತೆ ದೊಡ್ಡ ತಾರಾಬಳಗವಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!