ಹೊಸ ದಿಗಂತ ಡಿಜಿಟಲ್ ಡೆಸ್ಕ್
ರಾಜ್ಯದಲ್ಲಿ ಜನ ನೆಮ್ಮದಿಯಿಂದ ಬದುಕುವುದು ಕಷ್ಟವಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗ್ಯಾರಂಟಿಗಳಿಂದ ಜನ ನೆಮ್ಮದಿಯಿಂದ ಇದ್ದಾರೆಂದು ಜಾಹೀರಾತು ಪ್ರಕಟಿಸಿದ್ದಾರೆ. ಗ್ಯಾರಂಟಿ ಯೋಜನೆಗಳ ಬಗ್ಗೆ ಸಾಕಷ್ಟು ಜಾಹೀರಾತು ಪ್ರಕಟಿಸಿದ್ದೀರಿ. ಜನ ನೆಮ್ಮದಿಯಿಂದ ಇದ್ದಾರಾ ಇಲ್ಲ ಅಂತ ಜಾಹೀರಾತಿನಿಂದ ತಿಳಿಯಲ್ಲ ಎಂದರು.
ರಾಜ್ಯದಲ್ಲಿ ಅಕ್ರಮಗಳು, ಅಪರಾಧ ಚಟುವಟಿಗಳು ಹೆಚ್ಚುತ್ತಿವೆ. ರಾಜ್ಯದಲ್ಲಿ ಜನ ನೆಮ್ಮದಿಯಿಂದ ಬದುಕುವುದು ಕಷ್ಟಕರ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ ಕಿಡಿಕಾರಿದ್ಧಾರೆ.
ಕಾಂಗ್ರೆಸ್ನಿಂದ ಬಿಜೆಪಿ, ಜೆಡಿಎಸ್ ಶಾಸಕರನ್ನು ಸೆಳೆಯುವ ವಿಚಾರವಾಗಿ ಮಾತನಾಡಿದ ಅವರು ಕಾಂಗ್ರೆಸ್ನವರು ಬಿಜೆಪಿ, ಜೆಡಿಎಸ್ ಶಾಸಕರ ಸೆಳೆಯಲು ಶ್ರಮಿಸುತ್ತಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ 136 ಶಾಸಕರ ಬಲ ಇದೆ, ಇದೇನು ಬಲಹೀನವಲ್ಲ. ಸರ್ಕಾರ ನಡೆಸಲು ರಾಜ್ಯದ ಜನ ಶಕ್ತಿಯನ್ನ ನೀಡಿದ್ದಾರೆ. ರಾಜ್ಯದಲ್ಲಿ ಬರಗಾಲದಿಂದ ಬೆಳೆಹಾನಿಯಾಗಿ ರೈತರು ಕಷ್ಟದಲ್ಲಿದ್ದಾರೆ. ಕಷ್ಟಕರ ಪ್ರಕೃತಿಯ ಅಸಹಕಾರದಲ್ಲಿ ರಾಜ್ಯದ ಜನ ಸಿಲುಕಿದ್ದಾರೆ. ಜನರ ಬದುಕನ್ನ ಕಟ್ಟಿಕೊಡುವ ಕೆಲಸ ರಾಜ್ಯ ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.
ಸರ್ಕಾರದ ಅಕ್ರಮಗಳನ್ನು ಬಯಲಿಗೆ ತರುವ ಕೆಲಸ ಮಾಡುತ್ತಿದ್ದೇವೆ. ನಾವು ಬರ ವೀಕ್ಷಣೆಗೆ ಹೋದಾಗ ಲಘುವಾಗಿ ಮಾತನಾಡಿದರು. ರಾಜ್ಯದ ಜನರನ್ನೇ ಲೆಕ್ಕಕ್ಕೆ ಇಡದವರು ವಿಪಕ್ಷವನ್ನ ಗೌರವಿಸುತ್ತಾರಾ? ನೀವು ಏನೇ ಮಾಡಿದ್ರು ನಮ್ಮ ಬಾಯಿ ಮುಚ್ಚಿಸಲು, ಹೆದರಿಸಲು ಆಗಲ್ಲ. ಮುಂದೆ ಒಂದು ದಿನ ಜನ ಪಾಠ ಕಲಿಸುತ್ತಾರೆ ಎಂದು ಎಚ್ಚರಿಕೆ ನೀಡಿದರು.