ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾನೂನು ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ಹಾಗೂ ಕೆಲವು ವೀಡಿಯೊಗಳೊಂದಿಗೆ ಬ್ಲ್ಯಾಕ್‌ಮೇಲ್ ಮಾಡಿದ ಆರೋಪದ ಮೇಲೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಸಂಬಂಧ
ಐಟಿ ಆಕ್ಟ್ 2000 ರಿಂದ 2008 ರ ಸೆಕ್ಷನ್ 67 (ಎ) ಸೇರಿದಂತೆ BNS ಸೆಕ್ಷನ್ 70(1), 77, 351(2), 69 ಮತ್ತು 75(1) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ.
ಎಲ್ಲಾ ನಾಲ್ವರು ಆರೋಪಿಗಳನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಸಂತ್ರಸ್ತೆಯ ಗೆಳೆಯ (ವಂಶಿ) ಮತ್ತು ಆತನ ಮೂವರು ಆಪ್ತರು ಆರೋಪಿಗಳಾಗಿದ್ದಾರೆ ಎಂದು ವಿಶಾಖಪಟ್ಟಣಂ ಪೊಲೀಸ್ ಕಮಿಷನರ್ ಶಂಕ ಬ್ರತಾ ಬಾಗ್ಚಿ ತಿಳಿಸಿದ್ದಾರೆ.