ಹೊಸದಿಗಂತ ವರದಿ, ಅಂಕೋಲಾ :
ಜಿಲ್ಲೆಯಲ್ಲಿ ಮಳೆ- ನೆರೆಯಬ್ಬರ ಜೋರಾಗಿರುವುದರ ಮಧ್ಯೆಯೇ ಉ.ಕ ಜಿಲ್ಲಾಧಿಕಾರಿ ವರ್ಗಾವಣೆ ಆಗಿದ್ದು ನೂತನ ಜಿಲ್ಲಾಧಿಕಾರಿಯಾಗಿ ಲಕ್ಷ್ಮಿಪ್ರಿಯಾ ಕೆ ಅವರನ್ನು ನೇಮಕ ಮಾಡಲಾಗಿದೆ.
ಇವರು ಮೈಸೂರಿನಲ್ಲಿ ಅಬ್ದುಲ್ ನಜೀರಸಾಬ್ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಯ ನಿರ್ದೇಶಕರಾಗಿದ್ದರು.
ಹಾಲಿ ಜಿಲ್ಲಾಧಿಕಾರಿಯಾಗಿದ್ದ ಗಂಗೂಬಾಯಿ ಮಾನಕರ್ ಅವರನ್ನು ಬೆಂಗಳೂರಿನ ಕರ್ನಾಟಕ ಗೆಜೆಟೆಯರ್ ಇಲಾಖೆಯ ಮುಖ್ಯ ಸಂಪಾದಕ ಹುದ್ದೆಗೆ ವರ್ಗಾಯಿಸಲಾಗಿದೆ.