September 1, 2026
Tuesday, September 1, 2026
spot_img

ದಿನಭವಿಷ್ಯ: ಈ ರಾಶಿಯವರಿಗೆ ಇಂದು ಸೋಂಬೇರಿತನವೇ ಶತ್ರು, ನಿಮ್ಮ ಕೆಲಸ ನೀವೇ ಮಾಡಿದ್ರೆ ಯಶಸ್ಸು ಖಂಡಿತ

ಮೇಷ
ಆಪ್ತರ ಜತೆಗೆ ಮಾತಿನ ಚಕಮಕಿ ನಡೆದೀತು. ಕ್ಷುಲ್ಲಕ ವಿಚಾರ ಬದಿಗೆ ಸರಿಸಿ. ಗಂಭೀರ ವಿಷಯಕ್ಕೆ ಆದ್ಯತೆ ಕೊಡಿ. ಖರ್ಚು ಹೆಚ್ಚಲಿದೆ.  
ವೃಷಭ
ಖಾಸಗಿ ಕೆಲಸದಲ್ಲಿ ಹೆಚ್ಚು ಜವಾಬ್ದಾರಿ.ಚಾಡಿ ಮಾತುಗಳಿಗೆ ಕಿವಿ ಕೊಡಬೇಡಿ. ಇತರರ ಉಸಾಬರಿಗೆ ಅನವಶ್ಯ ತಲೆಹಾಕಬೇಡಿ.
ಮಿಥುನ
ಜಡತ್ವ ಬಿಟ್ಟು ವ್ಯವಹರಿಸಿ. ನಿಮ್ಮ  ಕಾರ್ಯವನ್ನು ಇತರರಿಗೆ ವಹಿಸಿಕೊಡಬೇಡಿ. ಆರ್ಥಿಕ ಸಂಕಷ್ಟ ನಿವಾರಣೆ. ವಸ್ತು ಖರೀದಿ.
ಕಟಕ
ಒತ್ತಡದಿಂದ  ಹೊರಬಂದು ಮೆಚ್ಚಿನ ಹವ್ಯಾಸದಲ್ಲಿ ತೊಡಗಿ. ಇತರರ ಸಂತೋಷದಲ್ಲಿ ನೀವು ತೃಪ್ತಿ ಪಡೆಯುವಿರಿ. ಕೌಟುಂಬಿಕ ನೆಮ್ಮದಿ.  
ಸಿಂಹ
ಯಾವುದೇ ವಿಚಾರದಲ್ಲಿ ನಿಮ್ಮ ನಿಲುವಿಗೇ ಅಂಟಿಕೊಳ್ಳುವ ಜಿಗುಟುತನ ಬಿಡಿ. ಕೆಲ ವಿಚಾರಗಳಲ್ಲಿ ಹೊಂದಾಣಿಕೆ ಒಳಿತು.  

ಕನ್ಯಾ
ಮನೆಯ ಸದಸ್ಯರ  ಜತೆ ಸಂವಹನ ಕೊರತೆ. ಬಾಂಧವ್ಯದಲ್ಲಿ ಬಿಕ್ಕಟ್ಟು. ಪ್ರತಿಕೂಲ ಪರಿಸ್ಥಿತಿಗೆ ಎದೆಗುಂದದಿರಿ. ಖರ್ಚು ನಿಯಂತ್ರಿಸಿ.  
ತುಲಾ
ಕೌಟುಂಬಿಕ ವ್ಯವಹಾರಕ್ಕೆ ತುಸು ಗಮನ ಕೊಡಿ. ವೃತ್ತಿ ಕಾರ್ಯದಲ್ಲಿ ಇತರ ವಿಷಯ ಕಡೆಗಣಿಸಬೇಡಿ. ಆರ್ಥಿಕ ಒತ್ತಡ ಹೆಚ್ಚಲಿದೆ.      
ವೃಶ್ಚಿಕ
ಕಷ್ಟ ಎದುರಾದರೂ ಅದಕ್ಕೆ ಪರಿಹಾರವೂ ದೊರಕುವುದು. ಹಾಗಾಗಿ ಹೆಚ್ಚು ಚಿಂತೆ ಅನವಶ್ಯ. ಬಿಕ್ಕಟ್ಟು ನಿವಾರಣೆಗೆ ಆತ್ಮೀಯರ ಸಹಕಾರ.
ಧನು
ಕಠಿಣ ಹೊಣೆಗಾರಿಕೆ ನಿಮ್ಮ ಮೇಲೆ ಬೀಳಲಿದೆ. ಬಂಧುಗಳ   ಸಹಕಾರದಿಂದ ಕಾರ್ಯ ಪ್ರಾಪ್ತಿ. ಹಣದ ಬಿಕ್ಕಟ್ಟು ಪರಿಹಾರ.  
ಮಕರ
ಕೆಲ ವಿಚಾರದಲ್ಲಿ ಉದ್ವಿಗ್ನತೆ ಉಂಟಾದೀತು. ಸಹನೆಯಿಂದ ನಿಭಾಯಿಸಿ. ದ್ವೇಷ ಸಾಧನೆಗೆ ಹೊರಡದಿರಿ. ಅದು ತಿರುಗುಬಾಣವಾದೀತು.    
ಕುಂಭ
ಮನೆಯಲ್ಲಿ ಶಾಂತಿ, ಸೌಹಾರ್ದ. ವೃತ್ತಿಯಲ್ಲಿ ಕೂಡ ಸಮಾಧಾನದ ಬೆಳವಣಿಗೆ. ನಿಮ್ಮ ಕೆಲಸವು ಇತರರಿಂದ ಮೆಚ್ಚುಗೆ ಪಡೆಯುವುದು.    
 ಮೀನ
ಕೌಟುಂಬಿಕ ಸಂಬಂಧ ಉತ್ತಮ. ಭಿನ್ನಮತ ನಿವಾರಣೆ. ವೃತ್ತಿಯಲ್ಲಿ ಕಾಡುತ್ತಿರುವ ಬಿಕ್ಕಟ್ಟಿಗೆ ಸದ್ಯ ಪರಿಹಾರ ಸಿಗಲಾರದು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !