ಸದನದಲ್ಲಿ ಧರಣಿ ಕೈಬಿಟ್ಟು ಜನರ ಸಮಸ್ಯೆಗಳ ಚರ್ಚೆಗೆ ಅವಕಾಶ ಕೊಡಿ: ಕಾಂಗ್ರೆಸ್ ನಾಯಕರಿಗೆ ಹೆಚ್.ವಿಶ್ವನಾಥ್ ಆಗ್ರಹ

ಹೊಸದಿಗಂತ ವರದಿ, ಮೈಸೂರು:

ಸಚಿವ ಕೆ.ಎಸ್.ಈಶ್ವರಪ್ಪ ನೀಡಿದ ಹೇಳಿಕೆಯೊಂದನ್ನು ಹಿಡಿದುಕೊಂಡು ವಿಧಾನಸಭೆಯಲ್ಲಿ ಧರಣಿ ನಡೆಸುವ ಮೂಲಕ ಅಮೂಲ್ಯವಾದ ಕಲಾಪವನ್ನು ಕಾಂಗ್ರೆಸ್‌ನವರು ಹಾಳು ಮಾಡುತ್ತಿರುವುದು ಸರಿಯಲ್ಲ ಎಂದು ವಿಧಾನಪರಿಷತ್ ಸದಸ್ಯ ಹೆಚ್.ವಿಶ್ವನಾಥ್ ಕಿಡಿಕಾರಿದರು.
ಶನಿವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು,
ಕೆಂಪುಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುವ ಬಗ್ಗೆ ಸಚಿವ ಕೆ.ಎಸ್.ಈಶ್ವರಪ್ಪ ನೀಡಿರುವ ಹೇಳಿಕೆ ಬಗ್ಗೆ ಸ್ಪಷ್ಟತೆ ಇಲ್ಲ. ಅವರು ಯಾವ ಅರ್ಥದಲ್ಲಿ ಏನು ಹೇಳಿದ್ದಾರೆ ಎಂಬುದನ್ನು ಮೊದಲು ತೋರಿಸಲಿ. ಆಮೇಲೆ ಉಳಿದಿದ್ದು ಚರ್ಚೆ ಆಗಲಿ. ಒಂದು ಹೇಳಿಕೆ ಹಿಡಿದುಕೊಂಡು ಕಾಂಗ್ರೆಸ್‌ನವರು ಇಡೀ ಸದನ ಸಮಯ ಹಾಳುಮಾಡಿದ್ದು ತಪ್ಪು. ಸಿದ್ದರಾಮಯ್ಯ ನಂತಹ ಹಿರಿಯರು ಇಂತಹ ನಡುವಳಿಕೆ ಪ್ರದರ್ಶಿಸ ಬಾರದಿತ್ತು ಎಂದು ಖಂಡಿಸಿದರು. ಮುಂದೆ ಚುನಾವಣೆ ಇರುವುದರಿಂದ ಓಟ್ ಬ್ಯಾಂಕ್ ಗಾಗಿ ಈ ರೀತಿ ಮಾಡ್ತಿದ್ದಾರೆ. ಪ್ರತಿಭಟನೆ ಯಾವುದಕ್ಕೂ ಪರಿಹಾರ ಅಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ಟಾಂಗ್ ನೀಡಿದರು.
ಸದನದ ಒಳಗಡೆ ತಪ್ಪುಗಳು ಆಗುತ್ತಿರುತ್ತವೆ. ಅದಕ್ಕೆ ಕ್ಷಮೆ ಕೇಳಿ ಮುಂದುವರೆದಿರುವ ಅನೇಕ ಉದಾಹರಣೆಗಳಿವೆ. ಈಗಲೂ ಅಂತಹ ನಡವಳಿಕೆಗಳು ಪ್ರದರ್ಶನವಾಗಬೇಕು. ಮುಖ್ಯಮಂತ್ರಿ, ಎರಡೂ ಸದನಗಳ ನಾಯಕರು ಹಾಗೂ ಸ್ಪೀಕರ್ ಗಳು ತುರ್ತಾಗಿ ಸಭೆ ನಡೆಸಬೇಕು. ಈ ಮೂಲಕ ಜನರ ಸಮಸ್ಯೆಗಳ ಚರ್ಚೆಗೆ ಸದನದಲ್ಲಿ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!