ರಾಷ್ಟ್ರೋತ್ಥಾನ ʼಕನ್ನಡ ಪುಸ್ತಕ ಹಬ್ಬʼ ದಲ್ಲಿ ಖ್ಯಾತ ಲೇಖಕರಿಂದ ಉಪನ್ಯಾಸ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌, ಬೆಂಗಳೂರು
ಎರಡು ವಾರಗಳ ಹಿಂದೆ ಪ್ರಾ ರಂಭವಾದ ರಾಷ್ಟ್ರೋತ್ಥಾನ ಕನ್ನಡ ಪುಸ್ತಕ ಹಬ್ಬ ದಲ್ಲಿ ನವೆಂಬರ್ ಎರಡನೇ ವಾರಾಂತ್ಯದಲ್ಲಿ ಮೂರು ಕಾರ್ಯಕ್ರಮಗಳನ್ನು ಆಯೋಜಿಸಿದೆ.
ನ.12 ರಂದು ಶನಿವಾರ ಬೆಳಗ್ಗೆ 11 ಗಂಟೆಗೆ ಖ್ಯಾತ ಲೇಖಕರು ಹಾಗೂ ಉಪಪನ್ಯಾಸಕರಾದ
ಸಂದೀಪ್‌ ಬಾಲಕೃಷ್ಣ ಅವರು ‘ಮೋಪ್ಲಾ’ ನೂರು; ಸಮಸ್ಯೆಗಳು ಸಾವಿರ ವಿಚಾರದ ಕುರಿತಾಗಿ ಉಪನ್ಯಾಸ ನೀಡಲಿದ್ದಾರೆ. ನ.13 ರಂದು ಭಾನುವಾರ ಬೆಳಗ್ಗೆ 11 ಗಂಟೆಗೆ ವಿಜಯಪುರದ ಪ್ರಾಧ್ಯಾಪಕರು ಹಾಗೂ ಲೇಖಕರಾದ ಡಾ. ಮಲ್ಲಿಕಾರ್ಜಯನ ಮೇತ್ರಿ ಅವರಿಂದ ಸಾಹಿತ್ಯ , ಪತ್ರಿಕಾ ಕ್ಷೇತ್ರ, ಸ್ವಾತಂತ್ರ್ಯ ಹೋರಾಟಕ್ಕೆ ಹರ್ಡೇಕರ್‌ ಮಂಜಪ್ಪ ಅವರ ಕೊಡುಗೆಗಳ ವಿಚಾರವಾಗಿ ಉಪನ್ಯಾಸವಿರುತ್ತದೆ.
ಅದೇ ದಿನ ಸಂಜೆ 5 ಗಂಟೆಗೆ ರಾಷ್ಟ್ರಪ್ರಶಸ್ತಿ ವಿಜೇತ ಸಿನೇಮಾ ನಿರ್ದೇಶಕರಾದ ಪಿ. ಶೇಷಾದ್ರಿ ಅವರೊಂದಿಗೆ ಕನ್ನಡ ಕಾದಂಬರಿಗಳು ಮತ್ತು ಸಿನೆಮಾ ಕುರಿತಾಗಿ ಸಂವಾದ ಕಾರ್ಯಕ್ರಮವಿರುತ್ತದೆ. ಸಂವಾದವನ್ನು ಲೇಖಕರು ಹಾಗೂ ರಂಗಕರ್ಮಿ ಸುಘೋಷ್ ನಿಗಳೆಯವರು ನಡೆಸಿಕೊಡಲಿದ್ದಾರೆ.
ಕರ್ನಾಟಕ ರಾಜ್ಯೋತ್ಸವದ ಸುಸಂದರ್ಭದಲ್ಲಿ ರಾಷ್ಟ್ರೋತ್ಥಾನ ಸಾಹಿತ್ಯ ಆಯೋಜಿಸಿರುವ ಕನ್ನಡ ಪುಸ್ತಕ ಹಬ್ಬದಲ್ಲಿ ಇದೇ ಸ್ವರೂಪದ ವಾರಾಂತ್ಯ ಉಪನ್ಯಾಸ, ಸಂವಾದ ಹಾಗೂ ಪುಸ್ತಕ ಬಿಡುಗಡೆ ಕಾರ್ಯಕ್ರಮಗಳು ನ.27ರ ವರೆಗೂ ಮುಂದುವರೆಯಲಿದೆ. ಮತ್ತೆ ಪ್ರತಿದಿನ ಬೆಳಗ್ಗೆಯಿಂದ ಸಂಜೆವರೆಗೆ ಪುಸ್ತಕ
ಪ್ರದರ್ಶನ ಹಾಗೂ ಮಾರಾಟ ಇರಲಿದೆ. ರಾಷ್ಟ್ರೋತ್ಥಾನ ಸಾಹಿತ್ಯ ಮಾತ್ರವಲ್ಲದೆ ಇತರೆ ಪ್ರಸಿದ್ಧ ಸಾಹಿತ್ಯಗಳೂ ಲಭ್ಯವಿರುತ್ತದೆ. 50% ವರೆಗೂ ರಿಯಾಯಿತಿ ಸಿಗಲಿದೆ. ಬೆಂಗಳೂರಿನ ಕೆಂಪೇಗೌಡ ನಗರದ ಕೇಶವಶಿಲ್ಪ ಸಂಭಾಂಗಣದಲ್ಲಿ ಪುಸ್ತಕ ಹಬ್ಬ ನಡೆಯುತ್ತಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!