ಕೇರಳದಲ್ಲಿ ಎಡರಂಗ ಸರಕಾರವು ತೀವ್ರವಾದಿಗಳನ್ನು ಬೆಳೆಸುತ್ತಿದೆ: ವೇಲಾಯುಧನ್ ಕಿಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಸಕಲ ಚರಾಚರಗಳಲ್ಲಿ ಈಶ್ವರನನ್ನು ಕಾಣುವ ಹಿಂದೂ ಸಮಾಜವನ್ನು ನಾಶಮಾಡಬೇಕೆನ್ನುವ ಮತೀಯವಾದಿ ಭಯೋತ್ಪಾದಕ ಸಂಘಟನೆಗಳು ಕೇರಳದಲ್ಲಿ ಬೆಳೆಯುತ್ತಿದೆ. ಇಂತಹ ಸಂಘಟನೆಗಳಿಗೆ ಬೆಂಬಲವಾಗಿ ಕೇರಳದ ಎಡರಂಗದ ಸರಕಾರವು ನಿಂತಿದೆ ಎಂಬುದನ್ನು ನಾವು ಮನಗಾಣಬೇಕಿದೆ. ಆದರೆ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರಕಾರವು ಎಲ್ಲಾ ಮತೀಯವಾದಿ ದುಷ್ಟಶಕ್ತಿಗಳನ್ನು ಹಿಮ್ಮೆಟ್ಟಿಸಲಿದೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೇಲಾಯುಧನ್ ಹೇಳಿದರು.
ಬಿಜೆಪಿ ಬದಿಯಡ್ಕ ಪಂಚಾಯಿತಿ ಸಮಿತಿಯ ವತಿಯಿಂದ ಬದಿಯಡ್ಕ ಪ್ರಧಾನ ಬಸ್ ತಂಗುದಾಣದಲ್ಲಿ ನಡೆದ ಜನಜಾಗೃತಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿಯು ಮುಸ್ಲಿಂ ವಿರೋಧಿಯಲ್ಲ. ಆದರೆ ಭಾರತೀಯ ಮೌಲ್ಯಗಳಿಗೆ ಬೆಲೆಯನ್ನು ನೀಡದ ಯಾವುದೇ ವ್ಯಕ್ತಿಗಳಿಗೆ, ಸಂಘಟನೆಗಳಿಗೆ ಇಲ್ಲಿ ಸ್ಥಾನವಿಲ್ಲ. ಇಲ್ಲಿನ ಅನ್ನವನ್ನು ತಿಂದು ದ್ರೋಹವನ್ನು ಬಗೆದರೆ ಅವರನ್ನು ಸುಮ್ಮನೆ ಬಿಡುವ ಜಾಯಮಾನ ನಮ್ಮದಲ್ಲ. ಎಸ್‌ಡಿಪಿಐಯಂತಹ ತೀವ್ರವಾದಿ ಸಂಘಟನೆಗಳನ್ನು ನಾವು ಒಗ್ಗಟ್ಟಿನಿಂದ ಮೆಟ್ಟಿನಿಲ್ಲಬೇಕಿದೆ. ಇಲ್ಲಿನ ಶಾಂತಿ ನೆಮ್ಮದಿಯನ್ನು ಕದಡುವ ಮತೀಯವಾದಿಗಳನ್ನು ಎದುರಿಸಲಿದ್ದೇವೆ ಎಂದರು. ಬಿಜೆಪಿ ಬದಿಯಡ್ಕ ಪಂಚಾಯಿತಿ ಸಮಿತಿ ಪೂರ್ವ ವಲಯ ಅಧ್ಯಕ್ಷೆ ಅಶ್ವಿನಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಬದಿಯಡ್ಕ ಮಂಡಲ ಅಧ್ಯಕ್ಷ ಹರೀಶ್ ನಾರಂಪಾಡಿ, ಎಂ.ಗೋಪಾಲಕೃಷ್ಣ, ಪಿ.ಆರ್. ಸುನಿಲ್, ಈಶ್ವರ ಮಾಸ್ತರ್ ಪೆರಡಾಲ, ಅವಿನಾಶ್ ರೈ, ಸೌಮ್ಯಾ ಮಹೇಶ್, ಜಯಂತಿ ಕುಂಟಿಕಾನ, ಶುಭಲತಾ ಹಾಗೂ ಪಕ್ಷದ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!