ಮೈಲಾರ ಕಾರ್ಣಿಕ ‌ವಿರುದ್ಧ ಕಾನೂನು ಹೋರಾಟ: ಧರ್ಮದರ್ಶಿ ವೆಂಕಪ್ಪಯ್ಯ

ಹೊಸದಿಗಂತ ವರದಿ, ವಿಜಯನಗರ:

ಇದು ದೈವ ವಾಣಿಯಲ್ಲ. ಗೊರವಯ್ಯ ರಾಮಪ್ಪನ ವಾಣಿ. ಈ ಬಾರಿಯ ಮೈಲಾರಲಿಂಗೇಶ್ವರ ಕಾರ್ಣಿಕ ಸತ್ಯವಾಗಲ್ಲ. ಕಾರ್ಣಿಕ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಮೈಲಾರ‌ ಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಓಡೆಯರ್ ಎಚ್ಚರಿಕೆ ನೀಡಿದರು.

ಹೂವಿನಹಡಗಲಿ ತಾಲೂಕಿನ‌ ಶ್ರೀಕ್ಷೇತ್ರ ಮೈಲಾರದ ಡಂಕರಡಿಯಲ್ಲಿ ಗೊರವಯ್ಯನ ಕಾರ್ಣಿಕ ನುಡಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಜಾತ್ರಾ ಸಂಪ್ರದಾಯದ ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಗುರುಪೀಠದ ಧರ್ಮದ ನಿಯಮಗಳನ್ನು ಪಾಲಿಸದೆ ಕಾರ್ಣಿಕ ನುಡಿದ್ದಾರೆ.

ಯಾರ ಅಣತಿಯಂತೆ ಕಾರ್ಣಿಕ ನುಡಿಯುತ್ತಿದಾರೊ ಗೊತ್ತಿಲ್ಲ. ಪದ್ಧತಿಯನ್ನು ಅನುಸರಿಸಿದರೆ ಮಾತ್ರ ದೈವವಾಣಿ ನುಡಿಯಲಿಕ್ಕೆ ಸಾಧ್ಯ. ಇದನ್ನು ನಂಬುವುದು ಬಿಡುವುದು ಭಕ್ತರಿಗೆ ಬಿಟ್ಟಿದ್ದು ಎಂದು ಹೇಳಿದ್ದಾರೆ.

ಕಾರ್ಣಿಕ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಹೇಳಿಕೆ ನೀಡುವ ಮೂಲಕ ಧರ್ಮದರ್ಶಿ ವೆಂಕಪ್ಪಯ್ಯ ಅವರು ಗೊರವಯ್ಯ ರಾಮಪ್ಪ ವಿರುದ್ಧ ಮತ್ತೆ ತಿರುಗಿಬಿದ್ದು, ಕಾರ್ಣಿಕ ಗೊಂದಕ್ಕೀಡಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!