ದಿನಭವಿಷ್ಯ: ಇಂದಿನ ದ್ವಾದಶ ರಾಶಿಗಳ ಫಲಾಫಲ ಹೇಗಿದೆ

ಮೇಷ: ನೀವಿಂದು ಹಣದ ವಿಚಾರದಲ್ಲಿ ಹೆಚ್ಚು ಜಾಗರೂತೆಯಿಂದ ವರ್ತಿಸಬೇಕು. ದಿನವಿಡೀ ಒತ್ತಡ. ಸಂಜೆ ವೇಳೆಗೆ ಅತೀವ ಬಳಲಿಕೆ ಕಾಡುವುದು.

ವೃಷಭ: ಪ್ರೀತಿಪಾತ್ರರ ಜತೆ ಸಣ್ಣ ವಿಷಯಕ್ಕೆ ಕಲಹ. ಇದು ದಿನವಿಡೀ ನಿಮ್ಮ ಮನಸ್ಸು ಕಲಕುವುದು. ಅನಿರೀಕ್ಷಿತ ಖರ್ಚು. ಕೆಲಸವನ್ನು ದಕ್ಷತೆಯಿಂದ ನಿಭಾಯಿಸಿ.

ಮಿಥುನ:ಆತ್ಮವಿಶ್ವಾಸ ಹೆಚ್ಚು. ಕಾರ್ಯದಲ್ಲಿ ಸಫಲತೆ. ಕೆಲವು ವಿಷಯಗಳಲ್ಲಿ ನಿಮ್ಮ ಅಭಿಪ್ರಾಯವನ್ನು ಇತರರಿಗೆ ಬಹಿರಂಗ ಮಾಡಬೇಡಿ. ಅದರಿಂದ ನಿಮಗೇ ಹಿನ್ನಡೆ.

ಕಟಕ: ಪ್ರೀತಿಯ ಭಾವವನ್ನು ವ್ಯಕ್ತಪಡಿಸಲು ಹಿಂಜರಿಕೆ ಬೇಡ. ಸಕಾರಾತ್ಮಕ ಸ್ಪಂದನೆ ಲಭ್ಯ. ಆರ್ಥಿಕವಾಗಿ ನಿಮಗೆ ಪೂರಕ ದಿನ. ಕಾರ್ಯದಲ್ಲಿ ಯಶಸ್ಸು.

ಸಿಂಹ: ವೃತ್ತಿಯಲ್ಲಿ ಹಲವು ಅವಕಾಶಗಳು. ಅದನ್ನು ಸದುಪಯೋಗ ಮಾಡಿಕೊಳ್ಳಿ. ನಿಮ್ಮನ್ನು ತಮ್ಮ ಸ್ವಾರ್ಥಕ್ಕೆ ಬಳಸಲು ಆಪ್ತರೊಬ್ಬರು ಯತ್ನಿಸುವರು.

ಕನ್ಯಾ:ಎಂದಿಗಿಂತ ವಿಭಿನ್ನ ದಿನ.  ವೃತ್ತಿಯಲ್ಲಿ ನಿಮ್ಮ ನಿರ್ಧಾರ ಆರಂಭದಲ್ಲಿ ಹಿನ್ನಡೆ ಕಂಡರೂ ಬಳಿಕ ಯಶ ಕಾಣುವುದು. ಆರೋಗ್ಯಕರ ಆಹಾರ ಮಾತ್ರ ಸೇವಿಸಿರಿ.

ತುಲಾ:ಬಂಧುಗಳ ಜತೆಗಿನ ನಿಮ್ಮ ಸಂಬಂಧ ಹಾಳು ಮಾಡಲು ಕೆಲವರ ಯತ್ನ. ಆದರೆ ಅದು ಫಲ ನೀಡದು. ನಿಮ್ಮ ನಿಲುವಿನಲ್ಲಿ ರಾಜಿ ಮಾಡಿಕೊಳ್ಳದಿರಿ.

ವೃಶ್ಚಿಕ: ಏನೋ ಕಳಕೊಂಡ ಭಾವನೆ. ಮನಸ್ಸಿನಲ್ಲಿ ಉದಾಸ ಭಾವ. ಆರೋಗ್ಯದ ಚಿಂತೆಯಿದ್ದರೆ ವೈದ್ಯಕೀಯ ತಪಾಸಣೆ ಮಾಡಿಕೊಳ್ಳಿ.

ಧನು: ನಿಮ್ಮ ಉದ್ದೇಶ ಸಾಧಿಸಲು ಇಂದು ಪೂರಕವಾದ ದಿನ. ನೀವು ಬಯಸಿದಂತೆ ಎಲ್ಲ ಕಾರ್ಯ ಸಾಗುವುದು. ಕೌಟುಂಬಿಕ ಸಹಕಾರ.

ಮಕರ:ನಿಮ್ಮ ಉದ್ದೇಶ ಸಾಧಿಸಲು ಇಂದು ಪೂರಕವಾದ ದಿನ. ನೀವು ಬಯಸಿದಂತೆ ಎಲ್ಲ ಕಾರ್ಯ ಸಾಗುವುದು. ಕೌಟುಂಬಿಕ ಸಹಕಾರ.

ಕುಂಭ: ಪ್ರೀತಿಪಾತ್ರರ ಜತೆ ಅಭಿಪ್ರಾಯಭೇದ ಉಂಟಾದೀತು. ಅದರಿಂದ ಮುನಿಸು. ಸಂಯಮದಿಂದ ನಡಕೊಳ್ಳಿ. ಆರೋಗ್ಯ ಸಮಸ್ಯೆ ಸಂಭವ.

ಮೀನ: ಹೆಚ್ಚು ಕೆಲಸ, ಹೆಚ್ಚು ಒತ್ತಡ. ಹಾಗೆಂದು ಕೆಲಸದ ಮೇಲಿನ ಏಕಾಗ್ರತೆ ಕಳಕೊಳ್ಳದಿರಿ. ಆತ್ಮೀಯರ ಜತೆ ಸಂವಹನದ ಕೊರತೆ, ಭಿನ್ನಮತ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!