ಹೊಸದಿಗಂತ ಡಿಜಿಟಲ್ ಡೆಸ್ಕ್:
ವಕ್ಫ್ ಆಸ್ತಿ ಅಕ್ರಮದಲ್ಲಿ ಹಾಲಿ, ಮಾಜಿ ಸಚಿವರೂ ಭಾಗಿಯಾಗಿದ್ದಾರೆ ಎಂದು ಬಿಜೆಪಿ ರಾಜ್ಯಸಭಾ ಸದಸ್ಯ ಲೇಹರ್ ಸಿಂಗ್ ಸಿರೋಯಾ ಗಂಭೀರ ಆರೋಪ ಮಾಡಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ತಂದಿರುವ ದಾಖಲೆಗಳು ಲೋಕಾಯುಕ್ತಕ್ಕೆ ರಾಜ್ಯ ಸರ್ಕಾರ ಕೊಟ್ಟಿದ್ದು. ವಕ್ಫ್ ಆಸ್ತಿಗಳ ತನಿಖೆಗೆ ಸರ್ಕಾರವು ಜಸ್ಟೀಸ್ ಎನ್. ಆನಂದ್ ಸಮಿತಿಯನ್ನು ಸರ್ಕಾರ ರಚಿಸಿತ್ತು. ಅದರಂತೆ ತನಿಖೆ ನಡೆಸಿ ಒಟ್ಟು 40 ಸಾವಿರ ಪುಟಗಳ ದಾಖಲೆಯನ್ನು ಸಮಿತಿ ಸರ್ಕಾರಕ್ಕೆ ಕೊಟ್ಟಿತ್ತು ಎಂದು ಲೇಹರ್ ಸಿಂಗ್ ಹೇಳಿದ್ದಾರೆ.
ಯಾವ್ಯಾವ ರೀತಿಯಾಗಿ ಹಗರಣ ಆಗಿದೆ ಎಂಬುದು ಈ ದಾಖಲೆಗಳಲ್ಲಿ ಇದೆ. ಬಹಳ ದೊಡ್ಡ ದೊಡ್ಡ ರಾಜಕಾರಣಿಗಳ ಹೆಸರು ಕೂಡ ಈ ದಾಖಲೆಗಳಲ್ಲಿದೆ. ಹಾಲಿ ಸಚಿವರು, ಮಾಜಿ ಸಚಿವರ ಹೆಸರುಗಳು ಕೂಡಾ ಈ ದಾಖಲೆಗಳಲ್ಲಿದೆ. ನಾನು ಯಾವುದೇ ರಾಜಕಾರಣಿಗಳ ಹೆಸರು ಬಹಿರಂಗಪಡಿಸುವುದಿಲ್ಲ ಎಂದು ಲೆಹರ್ ಸಿಂಗ್ ಹೇಳಿದ್ದಾರೆ.