Tuesday, March 28, 2023

Latest Posts

ಕೂಡ್ಲೂರುವಿನಲ್ಲಿ ಕರುವಿನ ಮೇಲೆ ಚಿರತೆ ದಾಳಿ

ಹೊಸದಿಗಂತ ವರದಿ ಕುಶಾಲನಗರ:

ಮನೆ ಸಮೀಪ ಕಟ್ಟಿ ಹಾಕಿದ್ದ ಕರುವಿನ ಮೇಲೆ ದಾಳಿ ಮಾಡಿ ಕೊಂದು ಹಾಕಿರುವ ಘಟನೆ ಇಲ್ಲಿಗೆ ಸಮೀಪದ ಕೂಡ್ಲೂರು ಗ್ರಾಮದಲ್ಲಿ ನಡೆದಿದೆ.
ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ‌ ಕೂಡ್ಲೂರು ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಕೂಡ್ಲೂರು ಬೆಟ್ಟದ ಸಮೀಪದ ಗ್ರಾಮವಾದ ಸುಂದರನಗರ ಗ್ರಾಮದಲ್ಲಿ ಕುಮಾರ ಎಂಬವರಿಗೆ ಸೇರಿದ ಕರುವನ್ನು ಗುರುವಾರ ರಾತ್ರಿ ಚಿರತೆ ಬಲಿ ತೆಗೆದುಕೊಂಡಿದೆ.

ಸಮೀಪ ಬೆಟ್ಟದಿಂದ ಬಂದ ಚಿರತೆ ಮನೆಯ ಸಮೀಪದಲ್ಲಿ ಕಟ್ಟಿ ಹಾಕಲಾಗಿದ್ದ ಕರುವಿನ ಮೇಲೆ ದಾಳಿ ಮಾಡಿ ಅದರ ಮಾಂಸವನ್ನು ತಿಂದು ಹೋಗಿದೆ. ಸ್ಧಳಕ್ಕೆ ಕುಶಾಲನಗರ ವಲಯ ಅರಣ್ಯ ಅಧಿಕಾರಿ ಶಿವರಾಮ್, ಆನೆಕಾಡು ಉಪ ವಲಯ ಅರಣ್ಯ ಅಧಿಕಾರಿ ಅನಿಲ್ ಡಿಸೋಜ ಹಾಗೂ‌ ಸಿಬ್ಬಂದಿ ವರ್ಗದವರು ತೆರಳಿ ಪರಿಶೀಲನೆ ನಡೆಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!