ಹಾಸನದಲ್ಲಿ ಜನರ ನಿದ್ದೆಗೆಡಿಸಿದ್ದ ಚಿರತೆ ಮರಿ ಬೋನಿಗೆ: ನಿಟ್ಟುಸಿರು ಬಿದ್ದ ಜನ

ಹೊಸದಿಗಂತ ವರದಿ ಹಾಸನ

ಕೊಣನೂರು ಹಂಡ್ರಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಂಕನಹಳ್ಳಿ ಗ್ರಾಮ ಸೇರಿ ಅಕ್ಕಪಕ್ಕದ ಗ್ರಾಮಗಳಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಭಯಗೊಳಿ ಸಿದ್ದ ಮೂರು ಚಿರತೆಗಳ ಪೈಕಿ 8 ತಿಂಗಳ ಹೆಣ್ಣು ಮರಿ ಚಿರತೆ ಅರಣ್ಯ ಇಲಾಖೆ ಅಂಕನಹಳ್ಳಿ ಕ್ವಾರೆ ಬಳಿ ಇಟ್ಟಿದ್ದ ಬೋನಿನಲ್ಲಿ ಬಂಧಿಯಾಗಿದೆ.

ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ಕೊಣನೂರು ಹೋಬಳಿಯ ಅಂಕನಹಳ್ಳಿ, ಮಜ್ಜನ ಹಳ್ಳಿ, ಗೇರುಬಾರೆ, ಬಿಸಳ್ಳಿ, ಚಿಕ್ಕ ಬೊಮ್ಮನಹಳ್ಳಿ ಸೇರಿ ಅಕ್ಕಪಕ್ಕದ ಗ್ರಾಮಗಳ ಕೃಷಿ ಜಮೀನು ಬಳಿ ಒಂದು ತಾಯಿ ಹಾಗು ಗಂಡು ಚಿರತೆ ಮರಿಯೊಂದಿಗೆ ಕಾಣಿಸಿ ಕೊಂಡು ನಾಯಿ, ಜಾನುವಾರುಗಳ ಮೇಲೆ ದಾಳಿ ಮಾಡುತಿದ್ದವು. ಚಿರತೆ ಗಳನ್ನು ಬಂಧಿಸುವಂತೆ ಗ್ರಾಮಸ್ಥರು ಅರಣ್ಯ ಇಲಾಖೆಯವರಿಗೆ ಮನವಿ ಮಾಡಿದ್ದರು.

ಕಳೆದ ಹತ್ತು ದಿನಗಳ ಹಿಂದೆ ಅಂಕನಹಳ್ಳಿ ಗ್ರಾಮದ ಪಾಳು ಬಿದ್ದಿರುವ ಕ್ವಾರೆಯಲ್ಲಿ ಬೋನ್ ಇಡಲಾಗಿತ್ತು. ಮೂರು ಚಿರತೆಗಳ ಪೈಕಿ ಮರಿ ಚಿರತೆ ಬೋನಿಗೆ ಬಿದ್ದಿದ್ದು, ತಾಯಿ, ಗಂಡು ಚಿರತೆ ತಪ್ಪಿಸಿಕೊಂಡಿವೆ ಎನ್ನಲಾಗಿದೆ. ಬಂಧಿ ಯಾಗಿರುವ ಮರಿ ಚಿರತೆಯನ್ನು ಚನ್ನರಾಯಪಟ್ಟಣಕ್ಕೆ ಕೊಂಡೊಯ್ದು ಚಿಪ್ ಅಳವಡಿಸಿ ಕಾಡಿಗೆ ಬಿಡುವ ಕೆಲಸಕ್ಕೆ ಅರಣ್ಯ ಇಲಾಖೆ ಅಧಿಕಾರಿ ಗಳು ಮುಂದಾಗಿದ್ದಾರೆ.

ತಾಲೂಕಿನ ಹಲವು ಗ್ರಾಮಗಳ ಕೃಷಿ ಜಮೀನಿಗೆ ಹೊಂದಿಕೊಂಡಂತಿ ರುವ ಅರಣ್ಯ ಪ್ರದೇಶ, ಕ್ವಾರೆಗಳ ಬಳಿ ಚಿರತೆಗಳ ಹಾವಳಿ ಕಂಡು ಬಂದಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಅರಣ್ಯ ಇಲಾಖೆ ಬೋನ್‌ಗಳನ್ನು ಇಟ್ಟು ಬಂಧಿಸಬೇಕು. ಈಗಾಗಲೇ ಭತ್ತ, ರಾಗಿ, ಜೋಳ ಸೇರಿ ತೋಟ ಗಾರಿಕೆ ಬೆಳೆಗಳ ಕಟಾವಿಗೆ ಮುಂದಾ ಗಿರುವ ರೈತರು ಸಂಕಷ್ಟ ಪರಿಸ್ಥಿರಿ ಎದುರಿಸುವಂತಾಗಿದೆ.ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ರೈತರು ಮನವಿ ಮಾಡಿದ್ದಾರೆ.

ಸ್ಥಳದಲ್ಲಿ ಅರಣ್ಯ ಪಾಲಕ ದೇವೇಂದ್ರ, ಉಪ ವಲಯ ಅರಣ್ಯ ಅಧಿಕಾರಿ ಶಂಕರ್, ನಾಗೇಶ್ ಇದ್ದರು.

 

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!