ಹೊಸದಿಗಂತ ವರದಿ,ಕೊಪ್ಪಳ:
ಕಳೆದ ಎರಡು ದಿನಗಳ ಹಿಂದೆ ರೈತ ಮೇಲೆ ದಾಳಿ ಮಾಡಿದ್ದ, ಶನಿವಾರ ಚಿರತೆ ಪ್ರತ್ಯಕ್ಷವಾಗಿದೆ. ಇದರಿಂದ ಜನರಲ್ಲಿ ಆತಂಕ ಉಂಟು ಮಾಡಿದೆ.
ಕೊಪ್ಪಳ ತಾಲೂಕಿನ ಹಿರೇಬಗನಾಳ-ಹಾಲವರ್ತಿ ಗ್ರಾಮದ ಬಳಿ ಶನಿವಾರ ಬೆಳಗ್ಗೆ ಚಿರತೆ ಪ್ರತ್ಯಕ್ಷವಾಗಿದೆ. ಈ ಗ್ರಾಮಗಳು ಜಿಲ್ಲಾ ಕೇಂದ್ರದಿಂದ 5 ಕಿ.ಮೀ ಅಂತರದಲ್ಲಿದೆ. ಮರವೇರಿ ಕುಳಿತ ಚಿರತೆ ಕಂಡು ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಚಿರತೆಯ ವಿಡಿಯೊವನ್ನು ಸ್ಥಳೀಯರು ಸೆರೆ ಹಿಡಿದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದಾರೆ. ಚಿರತೆ ಕಂಡು ಗ್ರಾಮದ ಬಳಿ ಒಂಟಿಯಾಗಿ ಹಾಗೂ ಬೈಕ್ ಮೇಲೆ ಯಾರು ಬರಬೇಡಿ ಎಂದು ಅಧಿಕಾರಿಗಳು ಗ್ರಾಮಸ್ಥರಿಗೆ ಮನವಿ ಮಾಡಿದ್ದಾರೆ. ಚಿರತೆ ಸೆರೆ ಹಿಡಿಯಲು ಅಲ್ಲೆಲ್ಲಿ ಬಲೆಯ ಗೇಟ್ ಗಳನ್ನು ಅಳವಡಿಸಿದ್ದಾರೆ.