Sunday, November 27, 2022

Latest Posts

ಬಾಲಿವುಡ್ ಹಿರಿಯ ನಟಿ ತಬಸ್ಸುಮ್ ಗೋವಿಲ್ ನಿಧನ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಬಾಲಿವುಡ್ ಜನಪ್ರಿಯ ನಟಿ ಮತ್ತು ಟಾಕ್ ಶೋ ನಿರೂಪಕಿ, ಬೇಬಿ ತಬಸ್ಸುಮ್ ಎಂದೂ ಕರೆಯಲ್ಪಡುವ ತಬಸ್ಸುಮ್ ಗೋವಿಲ್ ನಿಧನರಾಗಿದ್ದಾರೆ.
ಸ್ಥಳೀಯ ಮಾಧ್ಯಮಗಳ ವರದಿಯ ಪ್ರಕಾರ, ತಬಸ್ಸುಮ್ ( 78) ಹೃದಯ ಸ್ತಂಭನದಿಂದ ಸಾವನ್ನಪ್ಪಿದ್ದಾರೆ.
ಬಹಾರ್, ನರ್ಗಿಸ್ ಮತ್ತು ದೀದರ್ ನಂತಹ ಅವರ ವೃತ್ತಿಜೀವನದ ಟೈಮ್ ಲೈನ್ ನಲ್ಲಿ ಹಲವಾರು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರು. ನಂತರ ಅವರು ಭಾರತದ ಮೊದಲ ದೂರದರ್ಶನ ಟಾಕ್ ಶೋ ಫೂಲ್ ಖಿಲೆ ಹೈ ಗುಲ್ಶನ್ ಗುಲ್ಶನ್ ನ ನಿರೂಪಕರಾಗಿ ಪ್ರವೇಶಿಸಿದರು.
ನವೆಂಬರ್ 21 ರಂದು ಸಾಂತಾಕ್ರೂಜ್ ನ ಲಿಂಕಿಂಗ್ ರಸ್ತೆಯಲ್ಲಿರುವ ಆರ್ಯ ಸಮಾಜದಲ್ಲಿ ಅಂತ್ಯ ಸಂಸ್ಕಾರ ನಡೆಯಲಿದೆ ಎನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!