ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನಲ್ಲಿ ಕಾವೇರಿ ಹೋರಾಟದ ಬಿಸಿ ಜೋರಾಗಿದೆ. ಈಗಾಗಲೇ ನಗರದ ಎಲ್ಲಾ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಬಂದ್ ಹಿನ್ನೆಲೆ ಹಲವು ಖಾಸಗಿ ಕಂಪನಿಗಳು ವರ್ಕ್ ಫ್ರಮ್ ಹೋಂಗೆ ಅವಕಾಶ ಕೊಟ್ಟಿದ್ದು, ಜನರಿಲ್ಲದೆ ನಮ್ಮ ಮೆಟ್ರೋ ಬಿಕೋ ಎನ್ನುತ್ತಿವೆ.
ಕಾವೇರಿ ನದಿ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ವಿವಿಧ ಸಂಘಟನೆಗಳು ಕರೆ ನೀಡಿರುವ ಬಂದ್‌ನಿಂದಾಗಿ ಬೆಂಗಳೂರಿನ ವಿಜಯನಗರ ಮೆಟ್ರೋ ನಿಲ್ದಾಣದಲ್ಲಿ ಕಡಿಮೆ ಸಂಖ್ಯೆಯ ಪ್ರಯಾಣಿಕರು ಕಂಡುಬಂದರು. ಮೆಟ್ರೋದಲ್ಲಿ ಕೂಡ ಬೆರಳೆಣಿಕೆಯ ಪ್ರಯಾಣಿಕರು ಸಂಚರಿಸುತ್ತಿರುವುದು ಕಂಡು ಬಂತು.
#WATCH | Karnataka: Less number of passengers were seen at Vijayanagar Metro Station, Bengaluru because of the Bandh called by various organizations regarding the Cauvery water issue. pic.twitter.com/MFM5OslnmI
— ANI (@ANI) September 29, 2023