ಲತಾ ಮಂಗೇಶ್ಕರ್‌ ಬಗ್ಗೆ ತಿಳಿದಿರದ ಕೆಲವು ಇಂಟರೆಸ್ಟಿಂಗ್‌ ವಿಚಾರಗಳಿವು…

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಗಾನ ಲೋಕದ ಅನರ್ಘ್ಯ ರತ್ನ ಲತಾ ಮಂಗೇಶ್ಕರ್‌ ಅವರು ಇಂದು ಕೊನೆಯುಸಿರೆಳೆದಿದ್ದಾರೆ. ಲತಾ ಮಂಗೇಶ್ಕರ್‌ ಅವರು ಸಿನಿ ಜಗತ್ತಿಗೆ ಅಪಾರ ಕೊಡುಗೆಯನ್ನು ನೀಡಿದ್ದು, ದಶಕಗಳಿಂದ ಹಿನ್ನೆಲೆ ಗಾಯಕಿಯಾಗಿ ಸಾವಿರಾರು ಗಾಯಕರಿಗೆ ಐಕಾನ್‌ ಆಗಿದ್ದಾರೆ.

ಈ ಅತ್ಯಮೂಲ್ಯವಾದ ರತ್ನದ ಬಗ್ಗೆ ನಿಮಗೆ ಈ ವಿಚಾರಗಳು ತಿಳಿದಿವೆಯಾ ನೋಡಿ…

  • 7 ದಶಕಗಳಲ್ಲಿ 30ಸಾವಿರಕ್ಕೂ ಹೆಚ್ಚು ಹಾಡು. ಮರಾಠಿ ಚಿತ್ರದ ಹಾಡು ಹಾಡುವ ಮೂಲಕ 1942ರಲ್ಲೇ ಚಿತ್ರರಂಗಕ್ಕೆ ಪದಾರ್ಪಣೆ.
  • ಇವರು ಖ್ಯಾತ ಗಾಯಕಿ ಆಶಾ ಬೋಸ್ಲೆ ಅವರ ಸಹೋದರಿ.
  • ಬಾಲ್ಯದಲ್ಲಿ ಲತಾ ಮಂಗೇಶ್ಕರ್‌ ಹೆಸರು ಹೇಮಾ ಆಗಿತ್ತು.
  • 5 ವರ್ಷದ ಮಗುವಿದ್ದಾಗಲೇ ತಂದೆ ನಡೆಸುತ್ತಿದ್ದ ಸಂಗೀತ ನಾಟಕಗಳಲ್ಲಿ ನಟಿಸುತ್ತಿದ್ದರು.
  • ಸಂಗೀತ ನಿರ್ದೇಶಕ ಗುಲ್ಹಾಮ್‌ ಹೈದರ್‌ ಲತಾ ಮಂಗೇಶ್ಕರ್‌ ಗೆ ಆರಾಧ್ಯ ದೈವ. 1948ರಲ್ಲಿ ʼದಿಲ್‌ ಮೇರ ತೋಡʼ ಹಾಡು ಹಾಡೋಕೆ ಅವಕಾಶ ಕೊಟ್ಟರು.
  • 3 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ, ಭಾರತರತ್ನ, 4 ಫಿಲಂ ಫೇರ್‌ ಪ್ರಶಸ್ತಿ, ಪದ್ಮ ಭೂಷಣ, ಪದ್ಮವಿಭೂಷಣ, 12 ಬಂಗಾಳಿ ಚಿತ್ರ ಪತ್ರಕರ್ತ ಸಂಘದ ಪ್ರಶಸ್ತಿ.
  • ಹಿಂದಿ ಮಾತ್ರವಲ್ಲದೆ ಲತಾ ಮಂಗೇಶ್ಕರ್‌ ಬಂಗಾಳಿ, ಉರ್ದು, ಮರಾಠಿ, ಬೋಜ್ಪುರಿ, ಕನ್ನಡ ಹಾಡುಗಳನ್ನು ಹಾಡಿದ್ದಾರೆ.
  • ಮೊಹಮ್ಮದ್‌ ರಫಿ, ಎಸ್.ಪಿ. ಬಾಲಸುಬ್ರಮಣ್ಯಂ, ಕಿಶೋರ್‌ ಕುಮಾರ್‌, ಕುಮಾರ್‌ ಸನು, ಎ.ಆರ್‌. ರೆಹಮಾನ್‌, ಸೋನು ನಿಗಮ್‌ ಜತೆಯಲ್ಲಿ ಡುಯಟ್‌ ಹಾಡುಗಳನ್ನು ಹಾಡಿದ್ದಾರೆ.
  • ಹೇ ಮೇರೆ ವತನ್‌ ಕೀ ಲೋಗೋ ಹಾಡಿಗೆ ಅಂದಿನ ಪ್ರಧಾನಿ ಜವಹರ್ಲಾಲ್‌ ನೆಹರು ಕಣ್ನೀರಿಟ್ಟಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!