ಹೊಸದಿಗಂತ ವರದಿ ಉಡುಪಿ:
ನಾನು ಹೆಣ್ಮಗಳು ದೇಶದ ಗಡಿ ಬಾರಾಮುಲ್ಲಾಕ್ಕೆ ಹೋಗಿದ್ದೇನೆ. ರಾಹುಲ್ ಗಾಂಧಿ ಒಮ್ಮೆ ಅಲ್ಲಿಗೆ ಹೋಗಿ ಬರಲಿ ನೋಡೋಣ, ಭಾರತ್ ಜೋಡೋ ಯಾತ್ರೆಯನ್ನು ಕಾಂಗ್ರೆಸ್ ದೇಶದ ಗಡಿಯಲ್ಲಿ, ಸ್ವಾತಂತ್ರ್ಯಾನಂತರ ಪಾಕಿಸ್ತಾನ, ಚೀನಾ ಹಾಗು ಬಾಂಗ್ಲಾಕ್ಕೆ ಬಿಟ್ಟುಕೊಟ್ಟ ಜಾಗದಲ್ಲಿ ಮಾಡಲಿ ಎಂದು ರಾಹುಲ್ ಗಾಂಧಿಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸವಾಲೆಸೆದರು.
ಅವರು ಕಾಪುವಿನಲ್ಲಿ ಬಿಜೆಪಿ ಜನ ಸಂಕಲ್ಪ ಕಾರ್ಯಕ್ರಮದಲ್ಲಿ ಮಾತನಾಡಿ ಸ್ವಾತಂತ್ರ್ಯನಂತರ ಕಾಂಗ್ರೆಸ್ ಭಾರತವನ್ನು ಒಡೆದು ಮೂರು ದೇಶಗಳಿಗೆ ಕೊಟ್ಟಿದೆ. ದೇಶದ ಯಾವುದೇ ರಾಜ್ಯದಲ್ಲಿ ಕಾಂಗ್ರೆಸ್ ಗೆ ಅಸ್ತಿತ್ವ ಇಲ್ಲ ಎಂದರು.
ಸಿದ್ದರಾಮಯ್ಯ ಸರಕಾರ ಧರ್ಮ, ಜಾತಿ ಒಡೆದಾಳುವ ನೀತಿ ಮಾಡಿದೆ. ರಾಜ್ಯ ಒಡೆಯುವ ಷಡ್ಯಂತ್ರ ಮಾಡಿರುವುದು ಕಾಂಗ್ರೆಸ್ ಪಕ್ಷ. ಸಿದ್ದು, ಡಿಕೆ, ಖರ್ಗೆ ಮೊದಲು ನಿಮ್ಮ ನಿಮ್ಮ ಮನೆ ಸರಿ ಮಾಡಿಕೊಳ್ಳಿ. ನೀವು ದೇಶ ಸರಿ ಮಾಡಲು ಸಮರ್ಥವಾಗಿಲ್ಲ. ಮೋದಿಯಂತಹ ನೇತೃತ್ವ ಇನ್ನೊಮ್ಮೆ ಸಿಗಲು ಸಾಧ್ಯವಿಲ್ಲ ಎಂದರು.