ದಸರಾ ಆರಂಭಕ್ಕೂ ಮುನ್ನ ಚಾಮುಂಡಿ ಬೆಟ್ಟ ಪ್ಲಾಸ್ಟಿಕ್ ಮುಕ್ತವಾಗಲಿ: ಸುಭಾಷ್ ಬಿ.ಅಡಿ

ಹೊಸದಿಗಂತ ವರದಿ ಮೈಸೂರು:

ಇಲ್ಲಿನ ಚಾಮುಂಡಿ ಬೆಟ್ಟದಲ್ಲಿ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಲು ಎಲ್ಲಾ ಅಗತ್ಯವಾದ ಕ್ರಮಗಳನ್ನು ಕೈಗೊಂಡು, ಮೈಸೂರು ದಸರಾ ಮಹೋತ್ಸವ ಪ್ರಾರಂಭವಾಗುವ ಮುಂಚೆ ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಪ್ರದೇಶವಾಗಬೇಕು ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕಣದ ಮುಖ್ಯಸ್ಥಡಿಂಜ ನ್ಯಾಯಮೂರ್ತಿ ಸುಭಾಷ್ ಬಿ ಅಡಿ ತಿಳಿಸಿದರು.

ಶುಕ್ರವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಆಂಧಪ್ರದೆಶ್ರಕ್ಕೆ ತಿರುಪತಿ ಹೇಗೆ ಪ್ರಮುಖ, ಕರ್ನಾಟಕದಲ್ಲಿ ಅಷ್ಟೇ ಪ್ರಮುಖ ಚಾಮುಂಡಿ ಬೆಟ್ಟ. ಪರಿಸರವನ್ನು ಸಂರಕ್ಷಿಸುವಲ್ಲಿ ಪ್ರತಿಯೊಬ್ಬರೂ ಕಾಳಜಿ ವಹಿಸಬೇಕು. ಚಾಮುಂಡಿ ಬೆಟ್ಟಕ್ಕೆ ಎಂಟ್ರಿ ಆಗುವ ಪ್ರದೇಶದಲ್ಲಿಯೇ ಪ್ಲಾಸ್ಟಿಕ್ ಕೊಂಡ್ಯೋಯ್ಯದಂತೆ ಪರಿಶೀಲಿಸಿ, ತಡೆಯಬೇಕು. ಪ್ರತಿ ಸರ್ಕಾರಿ ಕಚೇರಿಗಳಲ್ಲಿ ಪ್ಲಾಸ್ಟಿಕ್ ನೀರಿನ ಬಾಟಲ್ ಗಳ ಬಳಕೆ ನಿಷೇಧಿಸಿ 20 ಲೀಟರ್ ನ ಕ್ಯಾನ್ ನೀರನ್ನು ಪೇಪರ್ ಕಪ್‌ನಲ್ಲಿ ಬಳಸಬೇಕು ಎಂದು ಸೂಚಿಸಿದರು.

ಚಾಮುಂಡಿಬೆಟ್ಟ ಪ್ಲಾಸ್ಟಿಕ್ ಬೆಟ್ಟ ಮುಕ್ತ ಮಾಡಲು ಅಲ್ಲಿನ ಗ್ರಾಮ ಪಂಚಾಯಿತಿ ಹಾಗೂ ದೇವಸ್ಧಾನ ಮಂಡಳಿ ಸೇರಿ ಅಂಗಡಿ ಮಳಿಗೆಗಳಲ್ಲಿ ಪ್ಲಾಸ್ಟಿಕ್ ಬಳಸದಂತೆ ಕ್ರಮವಹಿಸಬೇಕು. ಬಳಸಿದರೆ ದಂಡ ವಿಧಿಸುವ ಕೆಲಸ ಆಗಬೇಕು. ಕಾನೂನು ಪಾಲನೆ ಮಾಡದ್ದರೆ ಲೈಸನ್ಸ್ ರದ್ದು ಪಡಿಸಿ, ದೇವಸ್ಧಾನದ ಪ್ರವೇಶದಲ್ಲಿ ಪ್ಲಾಸ್ಟಿಕ್ ತರದಂತೆ ಪರಿಶೀಲಿಸಬೇಕು ಎಂದು ತಾಕೀತು ಮಾಡಿದರು.

ಹೊಟೇಲ್ ಗಳಲ್ಲಿ ಪ್ಲಾಸ್ಟಿಕ್ ಬಾಟಲ್ ಬಳಸದಂತೆ ಅರಿವು ಮೂಡಿಸಿ. ಬೀದಿ ಬದಿ ವ್ಯಾಪಾರಿಗಳು ಏಕ ಬಳಕೆಯ ಪ್ಲಾಸ್ಟಿಕ್ ಬಳಸದಂತೆ ಅರಿವು ಮೂಡಿಸಬೇಕು. ಕಾನೂನು ಪಾಲಿಸದಿದ್ದರೆ ದಂಡ ಹಾಕಿ. ಮೈಸೂರನ್ನು ಸ್ವಚ್ಛ ನಗರಿಯಾಗಿ ಇಟ್ಟುಕೊಳ್ಳಬೇಕು. ಏಕ ಬಳಕೆಯ ಪ್ಲಾಸ್ಟಿಕ್ ನ್ನು ನಿಷೇಧಿಸಿದ ಮೊದಲ ನಗರ ಮೈಸೂರು. ಎಲ್ಲಾ ಶಾಲಾ ಕಾಲೇಜುಗಳಲ್ಲಿ ಎಲ್ಲಾ ರೀತಿಯ ಪ್ಲಾಸ್ಟಿಕ್ ಬಳಕೆಯನ್ನು ತ್ಯಜಿಸಬೇಕು ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!