ಕಾಂಗ್ರೆಸ್ ಸಚಿವರು ಎಮ್ಮೆ, ಕೋಣಗಳಿಂದ ಗೃಹ ಪ್ರವೇಶ ಮಾಡಲಿ: ಟೆಂಗಿನಕಾಯಿ

ಹೊಸದಿಗಂತ ವರದಿ, ಹುಬ್ಬಳ್ಳಿ:

ಕಾಂಗ್ರೆಸ್ ಚುನಾವಣಾ ಪೂರ್ವದಲ್ಲಿ ನೀಡಿದ ಭರವಸೆಗಳ ಸಂಪೂರ್ಣವಾಗಿ ಈಡೇರಿಸಲಾಗದಿದ್ದರಿಂದ ಸರ್ಕಾರಕ್ಕೆ ಜನರು ಪ್ರಶ್ನೆ ಮಾಡುತ್ತಿದ್ದಾರೆ. ಅದನ್ನು ಮರೆಮಾಚುವ ಉದ್ದೇಶದಿಂದ ಗೋ ಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿ ಹಾಗೂ ಬಜರಂಗದಳ ಸ್ಥಗಿತ ಮಾಡುವ ವಿಚಾರ ಮುನ್ನೆಲೆ ತರುತ್ತಿದ್ದಾರೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಕಾಂಗ್ರೆಸ್ ಸಚಿವರ ವಿರುದ್ಧ ಹರಿಹಾಯ್ದರು.

ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿ ಅವರು, ಕಾಂಗ್ರೆಸ್ ಮೊದಲ ಜನರಿಗೆ ನೀಡಿದ ಭರವಸೆ ಯಾವುದೇ ಷರತ್ತುಗಳಿಲ್ಲದೆ ಈಡೇರಿಸಲಿ. ಗ್ಯಾರೆಂಟಿಗಳ ಬಗ್ಗೆ ಅಧಿವೇಶನದಲ್ಲಿ ನಾವು ಧ್ವನಿ ಎತ್ತುತ್ತೇವೆ ಎಂದರು.

ಗೋಹತ್ಯೆ ನಿಷೇಧ ಕಾಯ್ದೆ ತಿದ್ದುಪಡಿಗೆ ಮುಂದಾಗಿರುವ ಪಶುಸಂಗೋಪನಾ ಸಚಿವರು ನಿಮ್ಮ ಗೃಹ ಪ್ರವೇಶ ಗೋ ಮಾತೆ ಬದಲು ಎಮ್ಮೆ, ಕೋಣಗಳಗಳಿಂದ ಮಾಡಲಿ. ಆಗ ಗೋ ಮಾತೆಯ ಮಹತ್ವ ಏನೆಂಬುವುದು ಅರ್ಥವಾಗುತ್ತದೆ. ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ ಎಂದು ತಿಳಿಸಿದರು.

ಬಜರಂಗದಳ ಹಿಂದೂತ್ವ ಹಾಗೂ ಹಿಂದೂ ಸಮಾಜಕ್ಕೆ ಅನ್ಯಾಯವಾದಾಗ ಹೋರಾಟ ಮಾಡುವುದಾಗಿದೆ. ಹಿಂದೂ ಕಾರ್ಯಕರ್ತರು ತಮ್ಮ ಜೀವ ಪಣಕಿಟ್ಟು ಈ ಕೆಲಸ ಮಾಡುತ್ತಾರೆ. ಶಾಸಕ ರಿಜ್ವಾನ್ ಇರ್ಷಾದ ಇಲ್ಲ ಸಲ್ಲದ ಪ್ರಚೋದನಕಾರಿ ಹೇಳಿಕೆ ನೀಡುವುದು ಬಿಡಬೇಕು ಎಂದರು.

ಬಜರಂಗದಳ ಯಾವುದೇ ಸಂದರ್ಭದಲ್ಲಿ ಕಾನೂನು ಕೈಗೆತ್ತಿಕೊಂಡಿಲ್ಲ. ಸಂಬಂಪಟ್ಟ ಅಕಾರಿಗಳ ಸಮ್ಮುಖದಲ್ಲಿ ಸಮಸ್ಯೆ ಪರಿಹರಿಸಿದ್ದಾರೆ. ಕಾಂಗ್ರೆಸ್ ನಾಯಕರು ಮೊದಲು ಭಯೋತ್ಪಾದನೆ ಪ್ರೇರೆಪಿಸುವ ಪಿಎಫ್‌ಐ ಸಂಘಟನೆ ಬಗ್ಗೆ ಮಾತನಾಡಲಿ. ಅವರಿಗೆ ಬಜರಂಗದಳದ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಇಲ್ಲ ಎಂದು ತಿಳಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!