ಶಿವಮೊಗ್ಗ ಹರ್ಷ ಕೊಲೆ ಪ್ರಕರಣ: ಎನ್.ಐ.ಎ.ಯಿಂದ ತನಿಖೆಯಾಗಲಿ – ಹಿಂಜಾವೇ ಒತ್ತಾಯ

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಓಟಿನ ರಾಜಕೀಯದ, ಡೋಂಗಿ ಸೆಕ್ಯುಲರ್‌ವಾದಿಗಳ ಬೆಂಬಲದಿಂದ ತಾಲಿಬಾನ್ ಐಸಿಸ್ ಮಾನಸಿಕತೆಯ ಇಸ್ಲಾಮಿಕ್ ಭಯೋತ್ಪಾದಕರ ಹೇಡಿತನದ ಹೇಯ ಕೃತ್ಯಕ್ಕೆ ಮತ್ತೊಂದು ಬಲಿ ಶಿವಮೊಗ್ಗದ ಹಿಂದು ಕಾರ್ಯಕರ್ತ ಹರ್ಷ. ಈ ಪಾಶವೀ ಕೃತ್ಯವನ್ನು ಕರ್ನಾಟಕ ಹಿಂದು ಜಾಗರಣ ವೇದಿಕೆ ತೀಕ್ಷ್ಣವಾಗಿ ಖಂಡಿಸಿದೆ. ಮತಾಂಧ ಕೊಲೆ ಪಾತಕಿಗಳನ್ನು ಕೂಡಲೇ ಬಂಧಿಸಿ, ಅವರೇ ಜಾರಿಯಾಗಲೆಂದು ಬಯಸುವ ಷರಿಯಾ ಕಾನೂನಿನಂತೆ ಶಿಕ್ಷೆಗೆ ಒಳಪಡಿಸುವಂತೆ ಹಿಂಜಾವೇ ಆಗ್ರಹಿಸಿದೆ.

ಸೈದ್ಧಾಂತಿಕ ನೆಲೆಯಲ್ಲಿ ಹೋರಾಡುವುದಕ್ಕೆ ಬದಲಾಗಿ, ತಮ್ಮ ವಿಚಾರ ಒಪ್ಪದವರನ್ನು ಹತ್ಯೆ ಮಾಡುವ ಮೂಲಕ ಹಿಂದುತ್ವವನ್ನು ನಾಶ ಮಾಡಬಹುದೆಂಬ ಭ್ರಮೆಗೊಳಗಾದ ಮತಾಂಧ ಪಾಶವೀ ಶಕ್ತಿಗಳ ಕ್ರೂರ ಮಾನಸಿಕತೆಗೆ ಈ ಕೊಲೆ ಮತ್ತೊಂದು ಸಾಕ್ಷಿ. ಈ ಕೊಲೆಯಲ್ಲಿ ಪಿಎಫ್ಐ ಮತ್ತು ಎಸ್‌ಡಿಪಿಐ ನೇರ ಭಾಗಿಯಾಗಿದೆ ಎಂಬ ಬಲವಾದ ಸಂದೇಹವಿದೆ. ಈ ಹಿಂದೆಯೂ ನಡೆದ ಹಲವಾರು ಹಿಂದು ಕಾರ್ಯಕರ್ತರ ಕೊಲೆ ಪ್ರಕರಣಗಳಲ್ಲಿಯೂ ಇದೇ ಸಾಮ್ಯತೆ ಇರುವಂತಿದೆ. ಕತ್ತಲಲ್ಲಿ ಗುಂಪು ಕಟ್ಟಿಕೊಂಡು ಬಂದು ಹಿಂದಿನಿಂದ ಇರಿಯುವ ಕುತಂತ್ರ ಇಲ್ಲೂ ಬಳಕೆಯಾಗಿದೆ. ಹರ್ಷ ಕೊಲೆ ಪ್ರಕರಣದ ಜೊತೆಗೆ ಈ ಹಿಂದೆ ನಡೆದ ಎಲ್ಲ ಹಿಂದು ಕಾರ್ಯಕರ್ತರ ಕೊಲೆಗಳನ್ನು ಎನ್.ಐ.ಎ. ತನಿಖೆ ನಡೆಸಿ, ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಹಿಂದು ಹರ್ಷನ ಕುಟುಂಬಕ್ಕೆ ತಕ್ಷಣ ₹ 50 ಲಕ್ಷ ಪರಿಹಾರ ನೀಡುವಂತೆ ಹಿಂಜಾವೇ ಆಗ್ರಹಿಸಿದೆ.

ಹಿಜಾಬ್ ಸೇರಿದಂತೆ ರಾಜ್ಯದಾದ್ಯಂತ ಕೋಮುಗಲಭೆ ಎಬ್ಬಿಸಲು ಪ್ರಯತ್ನಿಸುತ್ತಿರುವ ಮತಾಂಧ ಶಕ್ತಿಗಳ ಸಂಚನ್ನು ಬಯಲಿಗೆಳೆಯುವಂತೆ ಸರಕಾರ ಮತ್ತು ಜಿಲ್ಲಾಡಳಿತಗಳನ್ನು ಕರ್ನಾಟಕ ಹಿಂದು ಜಾಗರಣ ವೇದಿಕೆಯ ದಕ್ಷಿಣ ಪ್ರಾಂತ ಪ್ರಧಾನಕಾರ್ಯದರ್ಶಿ ಉಲ್ಲಾಸ್ ಕೆ.ಟಿ. ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!