September 22, 2026
Tuesday, September 22, 2026
spot_img

ಲೆಟ್ ಇಟ್ ಗೋ: ಗೌರವ ಕೊಡದವರಿಂದ ಸೈಲೆಂಟ್‌ ಆಗಿ ವಾಕ್ ಔಟ್ ಮಾಡೋದು ಹೇಗೆ?

ನಮ್ಮ ಜೀವನದಲ್ಲಿ ಪ್ರತಿಯೊಬ್ಬರಿಗೂ ಸ್ವಭಿಮಾನ ಅನ್ನೋದು ಬಹಳ ಮುಖ್ಯ. ಆದ್ರೆ ಕೆಲವರು ಇರ್ತಾರೆ, ನಾವೆಷ್ಟೇ ಒಳ್ಳೆಯವರಾಗಿದ್ದರೂ ನಮ್ಮ ಮಾತಿಗೆ ಬೆಲೆ ಕೊಡಲ್ಲ, ಪ್ರತಿಯೊಂದಕ್ಕೂ ಕಡೆಗಣಿಸ್ತಾರೆ, ಉಡಾಫೆಯಾಗಿ ನಡೆದುಕೊಳ್ತಾರೆ. ಇಂಥವರಿಂದ ಮತ್ತೆ ಮತ್ತೆ ಏಟು ತಿನ್ನೋದಕ್ಕಿಂತ, ಅವರ ಲೈಫ್‌ನಿಂದ ಸೈಲೆಂಟ್‌ ಆಗಿ ಎಕ್ಸಿಟ್ ಆಗೋದು ಒಳ್ಳೆಯದು.

ಯಾರೋ ಒಬ್ಬರು ನಿಮ್ಮನ್ನು ಅಂಡರೆಸ್ಟಿಮೇಟ್ ಮಾಡೋಕೆ, ಕೀಳಾಗಿ ಮಾತಾಡೋಕೆ ನೀವು ಅವರ ಕೈಗೊಂಬೆಯಲ್ಲ. ನಿಮ್ಮ ಬೆಲೆ ಏನೆಂದು ನಿಮಗೆ ತಿಳಿದಿದ್ದರೆ, ಬೇರೆಯವರ ಮಾತು ನಿಮ್ಮನ್ನು ಕುಗ್ಗಿಸಲು ಸಾಧ್ಯವಿಲ್ಲ. ನಿಮಗೆ ಗೌರವ ಸಿಗದ ಕಡೆ ತಲೆ ತಗ್ಗಿಸಿ ನಿಲ್ಲುವ ಅಗತ್ಯವೇ ಇಲ್ಲ.

ಪ್ರತಿಯೊಂದು ಮಾತಿಗೂ ಜಗಳ ಆಡ್ತಾ ಕೂತ್ರೆ ನಿಮ್ಮ ಎನರ್ಜಿ ಮತ್ತು ನೆಮ್ಮದಿ ಎರಡೂ ವೇಸ್ಟ್. ಅವರು ನಿಮ್ಮನ್ನು ಪ್ರವೋಕ್ ಮಾಡಿದಾಗ, ಯಾವುದೇ ರಿಯಾಕ್ಷನ್ ಕೊಡದೆ ಸುಮ್ಮನಿದ್ದು ಬಿಡಿ.

ಸದಾ ‘ಎಸ್’ ಅಂತಿದ್ರೆ ಜನ ನಮ್ಮನ್ನು ಹಗುರವಾಗಿ ತಗೊಳ್ತಾರೆ. ಅವರು ನಿಮ್ಮ ಲಿಮಿಟ್ಸ್ ದಾಟಿ ಮಾತಾಡಿದಾಗ, ನಡೆದುಕೊಂಡಾಗ, “ಇದು ನನಗೆ ಇಷ್ಟವಿಲ್ಲ” ಎಂದು ಸ್ಪಷ್ಟವಾಗಿ ಹೇಳಿ. ನಿಮ್ಮ ಬೌಂಡ್ರಿಸ್ ಗಳನ್ನು ನೀವೇ ಸೆಟ್ ಮಾಡಿಕೊಳ್ಳಬೇಕು.

ಹೊಸದಾಗಿ ಯಾವುದೇ ಡ್ರಾಮಾ ಮಾಡೋಕೆ ಹೋಗಬೇಡಿ. ಮೆಲ್ಲಗೆ ಅವರೊಂದಿಗಿನ ಕಾಂಟ್ಯಾಕ್ಟ್ ಕಡಿಮೆ ಮಾಡಿ. ಕಾಲ್ಸ್, ಮೆಸೇಜಸ್, ಭೇಟಿಯಾಗೋದನ್ನು ಆದಷ್ಟು ಅವಾಯ್ಡ್ ಮಾಡಿ. ಸಂಬಂಧವನ್ನು ಕಟ್ ಮಾಡೋಕೆ ದೊಡ್ಡ ಜಗಳವೇ ಆಗ್ಬೇಕು ಅಂತೇನಿಲ್ಲ, ಮೌನವಾಗಿ ದೂರವಾಗೋದೇ ಬೆಸ್ಟ್.

ನಿಮ್ಮ ಜೊತೆ ಇರೋರು ನಿಮ್ಮ ಮುಖದಲ್ಲಿ ನಗು ತರಬೇಕೇ ಹೊರತು ಕಣ್ಣೀರು ತರಬಾರದು. ಯಾರೋ ಒಬ್ಬರು ನಿಮ್ಮನ್ನು ಪದೇ ಪದೇ ಹರ್ಟ್ ಮಾಡ್ತಿದ್ದಾರೆ ಅಂದ್ರೆ, ಅಲ್ಲಿಗೆ ಆ ಸಂಬಂಧದ ಆಯುಷ್ಯ ಮುಗಿಯಿತು ಎಂದರ್ಥ. ನಿಮ್ಮ ಪೀಸ್ ಆಫ್ ಮೈಂಡ್ ಗಿಂತ ಈ ಜಗತ್ತಿನಲ್ಲಿ ಯಾವುದೂ ದೊಡ್ಡದಲ್ಲ.

ಯಾರೋ ನಿಮ್ಮನ್ನು ಸರಿಯಾಗಿ ನಡೆಸಿಕೊಳ್ತಿಲ್ಲ ಅಂದ್ರೆ ಅದು ಅವರ ಪ್ರಾಬ್ಲಮ್, ನಿಮ್ಮದಲ್ಲ. ಸ್ವಾಭಿಮಾನಕ್ಕಿಂತ ದೊಡ್ಡದು ಯಾವುದೂ ಇಲ್ಲ, ಗೌರವವಿಲ್ಲದ ಕಡೆ ಪ್ರೀತಿ ಹುಡುಕೋದನ್ನು ಬಿಟ್ಟು, ನಗುನಗುತ್ತಾ ಮುನ್ನಡೆಯಿರಿ!

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !