ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಮುಂದಿನ ಸಿಎಂ ಹಾಗು ಕೆಪಿಸಿಸಿ ಕುರ್ಚಿ ಮೇಲೆ ಹಲವರು ಕಣ್ಣು ಇಟ್ಟಿದ್ದು, ಇದರ ನಡುವೆ ಕೋಡಿಮಠದ ಡಾ. ಶಿವಯೋಗಿ ಶಿವಾನಂದ ಸ್ವಾಮೀಜಿ ಸ್ಫೋಟಕ ಭವಿಷ್ಯ ನುಡಿದಿದ್ದಾರೆ.
ಕಾರ್ಯಕ್ರಮದ ಒಂದರಲ್ಲಿ ಭಾಗಿಯಾಗಿ ಮಾತನಾಡಿದ ಸ್ವಾಮೀಜಿ, ಮೊನ್ನೆ ಸಿದ್ದರಾಮಯ್ಯ ಜೊತೆ ಮಾತನಾಡುತ್ತಿದ್ದೆ. ಈ ವೇಳೆ ಉತ್ತರ ಕರ್ನಾಟಕದಿಂದ ಯಾರಾದ್ರು ಸಿಎಂ ಆದ್ರೆ ಎಂಬಿ ಪಾಟೀಲ್ ಆಗಲಿ ಎಂದೆ ಎಂದು ಹೇಳಿದರು.
ಇನ್ನು ಈ ವೇಳೆ ಸ್ವಾಮೀಜಿ ಪಕ್ಕದಲ್ಲೇ ಸಚಿವ ಎಂಬಿ ಪಾಟೀಲ್ ಕುಳಿತಿದ್ದರು. ಎಂಬಿ ಪಾಟೀಲ್ ಸಿಎಂ ಆಗಲಿ ಎಂದು ಸ್ವಾಮೀಜಿ ಹೇಳುತ್ತಿದಂತೆ ಸಚಿವರು ಕೈಮುಗಿದು ನಮಸ್ಕರಿಸಿದ್ದಾರೆ.
ಇನ್ನು ಕಳೆದ ಬಾರಿ ರಾಜ್ಯದಲ್ಲಿ ಮಹಿಳಾ ಸಿಎಂ ಆಗುತ್ತಾರೆ ಎಂದು ಕೋಡಿಶ್ರೀಗಳು ಭವಿಷ್ಯ ನುಡಿದಿದ್ದರು. ಈ ವೇಳೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೆಸರು ಭಾರೀ ಚರ್ಚೆಗೆ ಬಂದಿತ್ತು. ಇದೀಗ ಕೋಡಿ ಮಠದ ಸ್ವಾಮೀಜಿ ಮತ್ತೆ ಭವಿಷ್ಯ ನುಡಿದಿದ್ದು, ಎಂಬಿ ಪಾಟೀಲ್ ಅವರು ರಾಜ್ಯದ ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಹೇಳಿದ್ದಾರೆ.ರಾಜ್ಯ ರಾಜಕೀಯದಲ್ಲಿ ಹೊಸ ಹೆಸರು ಮುನ್ನೆಲೆಗೆ ಬಂದಿದೆ.