ಮಕ್ಕಳಿಗೆ ಹಣ ಉಳಿಸೋ ಬಗ್ಗೆ ಪಾಠ ಹೇಳಿಕೊಡಬೇಕಾದ್ದು ನೀವೆ, ಈಗಿನ ಅಭ್ಯಾಸಗಳೇ ಅವರ ಮುಂದಿನ ಜೀವನದಲ್ಲಿ ಹಣ ಉಳಿಸುವ ಬಗೆಗಿನ ಪಾಠಗಳಾಗಿ ಉಳಿದುಬಿಡುತ್ತವೆ. ಮನೆಯಲ್ಲಿ ಒಂದು ಪುಟ್ಟ ಹುಂಡಿ ತಂದಿಡಿ, ಮಕ್ಕಳಿಗೆ ಎಂದೇ ಅದನ್ನು ಕೊಟ್ಟುಬಿಡಿ, ಹುಂಡಿ ತುಂಬಿದ ನಂತರ ಏನೆಲ್ಲಾ ಮಾಡಬಹುದು ಎನ್ನುವ ಪಾಠ ಹೇಳಿಕೊಡಿ..
ಮನೆಯಲ್ಲೇ ಪಿಗ್ಗಿಬ್ಯಾಂಕ್ ಮಾಡಿಟ್ರೆ ಏನೆಲ್ಲಾ ಲಾಭ ನೋಡಿ..
ಉಳಿದ ಚಿಲ್ಲರೆಗಳನ್ನು ಸೀದ ತಂದು ಪಿಗ್ಗಿ ಬ್ಯಾಂಕ್‌ಗೆ ಹಾಕಿಡಿ, ಇದರಿಂದ ಚಿಲ್ಲರೆ ಹಣ ಎಲ್ಲಿಯೂ ಹೋಗೋದಿಲ್ಲ. ಅದೂ ಮುಂದೆ ನಿಮ್ಮ ಉಪಯೋಗಕ್ಕೆ ಬರುತ್ತದೆ. ಮಕ್ಕಳು ಇದನ್ನು ಫಾಲೋ ಮಾಡ್ತಾರೆ.
ಹುಂಡಿಯಲ್ಲಿಟ್ಟ ಹಣವನ್ನು ತೆಗೆಯಬಾರದು, ಅದು ನಮ್ಮ ಸೇವಿಂಗ್ಸ್ ಎಂದು ಮಕ್ಕಳಿಗೆ ಹೇಳಿಕೊಡಿ. ಅವರೇ ಯಾವುದೇ ವಸ್ತು ಖರೀದಿಗೆ ಹಣ ಶಾರ್ಟೇಜ್ ಆದರೆ ಹುಂಡಿಯಿಂದ ಹಣ ತೆಗೆದು ಕೊಡಿ ಆಗ ಹಣದ ಬೆಲೆ ತಿಳಿಯುತ್ತದೆ. ಸೇವಿಂಗ್ಸ್ ಇದ್ದರೆ ಉಪಯೋಗ ಎಂದು ಅರ್ಥವಾಗುತ್ತದೆ.
ಮನೆಗೆ ಬಂದ ನೆಂಟರು, ಅಜ್ಜಿ ತಾತ ಯಾರಾದರೂ ಹಣ ಕೊಟ್ಟರೆ ತಕ್ಷಣ ಅದನ್ನು ಖರ್ಚು ಮಾಡದೇ ಡಬ್ಬಿಗೆ ಹಾಕಿಸಿ, ಡಬ್ಬಿ ತುಂಬಿದ ನಂತರ ಅವರಿಷ್ಟದ ಸೈಕಲ್ ಅಥವಾ ಇನ್ಯಾವುದೋ ವಸ್ತು ಕೊಡಿಸಿ. ಹಣ ಕೂಡಿಸಿ ಇಟ್ಟರೆ ನಮ್ಮ ಇಷ್ಟದ ವಸ್ತು ಕೊಳ್ಳಬಹುದು ಎಂದು ಮಕ್ಕಳು ತಿಳಿಯುತ್ತಾರೆ.
ಯಾವಾಗಲೂ ಸೇವಿಂಗ್ಸ್ ಇರಬೇಕು, ಇದರಿಂದ ಕಷ್ಟಕರ ಸಂದರ್ಭಗಳಲ್ಲಿ ನಾವು ನಮ್ಮನ್ನು ಹೇಗೆ ರಕ್ಷಿಸಿಕೊಳ್ಳಬಹುದು ಎನ್ನುವ ಪಾಠವನ್ನು ಮಕ್ಕಳಿಗೆ ಹೇಳಿಕೊಡಲು ಇದಕ್ಕಿಂತ ಸುಲಭ ವಿಧಾನ ಮತ್ತೊಂದಿಲ್ಲ.